ರಾಜ್ಯ

ಗ್ರಾಮೀಣ ಮಕ್ಕಳಿಗಾಗಿ ಉತ್ತರ ಕರ್ನಾಟಕದಲ್ಲಿ ಉತ್ತಮ ಶಾಲೆಗಳನ್ನು ಸ್ಥಾಪಿಸಲು ಬಯಸಿದ್ದರು ಸುರೇಶ್ ಅಂಗಡಿ

Shilpa D

ಬೆಳಗಾವಿ: ಕೊರೋನಾದಿಂದ ಸಾವನ್ನಪ್ಪಿದ ಕೇಂದ್ರ ಸಚಿವ ಸುರೇಶ್ ಅಂಗಡಿ ತಮ್ಮ ಕಾನೂನು ಪದವಿ ಪೂರ್ಣ ಗೊಳಿಸಿದ ನಂತರ ಬೆಳಗಾವಿಯಲ್ಲಿ ವಾಸವದತ್ತ ಸಿಮೆಂಟ್ ಅಂಗಡಿ ತೆರೆದು ಪ್ರಸಿದ್ದರಾದರು.

ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಪ್ರಮುಖವಾಗಿ ಬೆಳಗಾವಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಬಯಸಿದ್ದರು ಎಂದು ಅವರ ಸ್ನೇಹಿತ ಅಶೋಕ್ ಚಂದರ್ಗಿ ತಿಳಿಸಿದ್ದಾರೆ.

ತಮ್ಮ ಗ್ರಾಮ ಕೆಕೆ ಕಾಪ್ ನಲ್ಲಿ ಹಲವು ಶಾಲಾ ಕಾಲೇಜುಗಳನ್ನು ಸ್ಥಾಪಿಸುವುದರ ಜೊತೆಗೆ ಬೆಳಗಾವಿಯಲ್ಲಿ ಕೆಲವು ವರ್ಷಗಳ ಹಿಂದೆ ಅಂಗಡಿ ಇನ್ ಸ್ಟಿಟ್ಯೂಟ್  ಆಫ್ ಟೆಕ್ನಾಲಜಿ ಅಂಡ್ ಎಂಜಿನೀಯರಿಂಗ್ ಕಾಲೇಜು ಸ್ಥಾಪಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾದಾಗಿನಿಂದಲೂ ಬೆಳಗಾವಿಯ 18 ವಿಧಾನಸಭಾ ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿದೆ. ಬೆಳಗಾವಿಯ ಮೊದಲ ಬಿಜೆಪಿ ಸಂಸದ ಬಾಬಾಗೌಡ ಪಾಟೀಲ್ ಮೊಟ್ಟ ಮೊದಲ ಬಾರಿಗೆ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. 2004 ರಲ್ಲಿ ಬಿಜೆಪಿ ನಾಯಕರು ಸುರೇಶ್ ಅಂಗಡಿ ಅವರನ್ನು ಚುನಾವಣೆಗೆ ನಿಲ್ಲಿಸಿತು. ಬಾಬಾಗೌಡ ಪಾಟೀಲ್ ಗಿಂತ ಸುರೇಶ್ ಅಂಗಡಿ ಈ ಭಾಗದಲ್ಲಿ ಪ್ರಸಿದ್ದರಾಗಿದ್ದರಿ.

ಅವರೊಬ್ಬ ಮಾನವೀಯತೆ ಗುಣವುಳ್ಳ ಅತ್ಯುತ್ತಮ ಮನುಷ್ಯ, ಅವರ ನಿಧನದ ಸುದ್ದಿಯಿಂದ ನನಗೆ ತುಂಬಾ ಆಘಾತವಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಜನರಿಗೆ ಗೌರವ ನೀಡುತ್ತಿದ್ದ ಅಂಗಡಿ ಉತ್ತಮ ರಾಜಕಾರಣಿಯಾಗಿದ್ದರು,  ಅವರು ಸಚಿವರಾದ ನಂತರ ಬಾಕಿ ಉಳಿದಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಿದ್ದರು. ಅವರಂತ ಸಮರ್ಥ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
 

SCROLL FOR NEXT