ರಾಜ್ಯ

ಬೆಳಗಾವಿ ಪೋಲೀಸರ ಭರ್ಜರಿ ಬೇಟೆ: 24 ಲಕ್ಷ ರೂ. ಮೌಲ್ಯದ ಗಾಂಜಾ ವಶ, ಓರ್ವನ ಬಂಧನ

Raghavendra Adiga

ಬೆಳಗಾವಿ: ಅಂತರರಾಜ್ಯ ಡ್ರಗ್ ಪೆಡ್ಲರ್ ನೊಬ್ಬನನ್ನು ಶನಿವಾರ ಬಂಧಿಸಿರುವ ಬೆಳಗಾವಿ ಜಿಲ್ಲಾ ಅಪರಾಧ ಗುಪ್ತಚರ ದಳ (ಡಿಸಿಐಬಿ) 24 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗೆ  ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ ತೆಲಂಗಾಣದ ವಾರಂಗಲ್ ಮತ್ತು ಹೈದರಾಬಾದ್‌ನ ಇನ್ನೂ ಇಬ್ಬರು ವ್ಯಕ್ತಿಗಳನ್ನು ಬಂಧಿಸಲು ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

ಪ್ಟೆಂಬರ್ 22 ರಂದು ಚಿಕ್ಕೋಡಿ ಪೊಲೀಸರು ಮೀರಜ್  ನಿವಾಸಿ  ಡ್ರಗ್ ಪೆಡ್ಲರ್ ಆಶ್ಪಕ್ ಮುಲ್ಲಾ  ಎಂದು ಗುರುತಿಸಲ್ಪಟ್ಟ ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಸ್ಥಳದಲ್ಲೇ ಆತನ ಬಳಿಯಿದ್ದ  2 ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಶನಿವಾರ  ಹೇಳಿಕೆ ನೀಡಿದ್ದಾರೆ.  ಬಂಧಿತನ ಸಹಚರ ಹಾಗೂ ಮುಖ್ಯ ಆರೋಪಿ ತಲೆತಪ್ಪಿಸಿಕೊಂಡಿದ್ದಾರೆ.

ಡಿಸಿಐಬಿ ವಿಶೇಷ ತಂಡವನ್ನು ಸ್ಥಾಪಿಸಿ ಸೆಪ್ಟೆಂಬರ್ 23 ರಂದು ಮುಲ್ಲಾನನ್ನು  ಮೀರಜ್ ನಿಂದ  ಬಂಧಿಸುವಲ್ಲಿ ಯಶಸ್ವಿಯಾಯಿತು. ವಿಚಾರಣೆ ವೇಳೆ ಮುಲ್ಲಾ ಅಧಿಕಾರಿಗಳಿಗೆ ತಿಳಿಸಿದ್ದು, ವಾರಂಗಲ್ ಮತ್ತು ಹೈದರಾಬಾದ್ ಮೂಲದ ಇಬ್ಬರು ತನಗೆ ಗಾಂಜಾ ಸರಬರಾಜು ಮಾಡುತ್ತಿದ್ದರು ಮತ್ತು ಅವರು ಮಹಾರಾಷ್ಟ್ರದ ಮೀರಜ್ ಮತ್ತು ಸಾಂಗ್ಲಿಯಲ್ಲಿಗಾಂಜಾ ಮಾರಾಟ ನಡೆಸಿದ್ದರು. ಅಲ್ಲದೆ ಬೆಳಗಾವಿಯ ಚಿಕ್ಕೋಡಿಮ್ ಧಾರವಾಡಗಳಲ್ಲಿ ಅವರ್ ವ್ಯವಹಾರವಿದೆ ಎಂದು ಬಾಯಿಬಿಟ್ಟಿದ್ದಾನೆ,

ಮೀರಜ್ ನ  ಮಹಿಷಾದಲ್ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನ ಹಿಂದಿನ ಭಾಗದಲ್ಲಿ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಿದ್ದ 40 ಕೆಜಿ ತೂಕದ ಗಾಂಜಾ ಮತ್ತು ಅದೇ ಗ್ರಾಮದ ಕೃಷಿ ಭೂಮಿಯಲ್ಲಿರುವ ತೋಟದ ಮನೆಯಲ್ಲಿ 78 ಕೆಜಿ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

SCROLL FOR NEXT