ರಾಜ್ಯ

ತೀವ್ರ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರ

Lingaraj Badiger

ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂ ಕಂದಾಯ ಸುಧಾರಣಾ ತಿದ್ದುಪಡಿ ವಿಧೇಯಕವನ್ನು ಕಾಂಗ್ರೆಸ್ ವಿರೋಧದ ನಡುವೆಯೇ ಶನಿವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.

ಈ ವಿಧೇಯಕದ ಪ್ರಕಾರ, ಯಾರೂ ಬೇಕಾದರು ಕೃಷಿ ಭೂಮಿಯನ್ನು ಖರೀದಿಸಬಹುದಾಗಿದೆ. ಹೀಗಾಗಿ ಪ್ರತಿಪಕ್ಷ ಕಾಂಗ್ರೆಸ್ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಇಂದು ವಿಧಾನಸಭೆಯಲ್ಲಿ ವಿವಾದಾತ್ಮಕ ವಿಧೇಯಕದ ಕುರಿತು ಸುದೀರ್ಘ, ಕಾವೇರಿದ ಚರ್ಚೆ ಮತ್ತು ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೆ ಅಂಗೀಕರಿಸಲಾಯಿತು. 

ಭೂ ಸುಧಾರಣೆಗಳ ವಿದೇಯಕ ರೈತರ ಪಾಲಿಗೆ ಮರಣ ಶಾಸನ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಈ ಕುರಿತ ಚರ್ಚೆಯ ಮೇಲೆ ಮಾತನಾಡಿದ ಅವರು, ಹಳ್ಳಿಗಾಡಿನ ಆರ್ಥಿಕತೆ ಹಾಳಾಗಲಿದೆ. ರೈತರನ್ನು ದಿವಾಳಿ ಅಂಚಿಗೆ ನೂಕಲಿದೆ . ದೇವರಾಜ ಅರಸರ ಕಾಲದ ಕಾಯಿದೆಯ ಆತ್ಮವನ್ನೆ ಕೊಲ್ಲಲಿದೆ ಎಂದರು . ಕಾಯಿದೆ ವಿರುದ್ಧ ರೈತರು ಮತ್ತು ಕಾರ್ಮಿರಕರು ಸಿಡಿದೆದ್ದಾರೆ ಇದಕ್ಕಾಗಿ ಇದೆ 28 ರಂದು ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ ಇದು ನಿಜಕ್ಕೂ ದುರುದ್ಧೇಶದ ತಿದ್ದಪಡಿ ಮಸೂದೆಯಾಗಿದೆ, ಜನ ವಿರೋಧಿಯಾಗಿದೆ ಎಂದರು. 

ವಿಧಾನನಸಭೆಯಲ್ಲಿ ಮಸೂದೆ ಕುರಿತ ಚರ್ಚೆಗೆ ಉತ್ತರ ನೀಡಿದ ಕಂದಾಯ ಸಚಿವ ಆರ್ ಆಶೋಕ್ ಅವರು, ಈ ಕಾಯಿದೆ ಕೃಷಿಯತ್ತ ಒಲವು ಇರುವ ಜನರಿಗೆ ಬಹಳ ಅನುಕೂಲವಾಗಲಿದೆ. ಬೀಳುಬಿಟ್ಟ ಜಮೀನು ಉಪಯೋಗ ಮಾಡಲು ಪ್ರಯೋಜನವಾಗಲಿದೆ. ನಾಡಿನ ಸಮಗ್ರ ಅಭಿವೃದ್ದಿಯ ಹಿನ್ನಲೆಯಲ್ಲಿ ಕಾಯಿದೆ ತರಲಾಗುತ್ತಿದೆ ಎಂದು ಬಲವಾಗಿ ಸಮರ್ಥನೆ ಮಾಡಿಕೊಂಡರು.

ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಕೆಲ ಕಾಲ ಮಾತಿಕ ಚಕಮಕಿಯೂ ನಡೆಯಿತು ನಂತರ ಮಸೂದೆಗೆ ಸದನ ದ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ಭೂ ಕಂದಾಯ ಸುಧಾರಣಾ ತಿದ್ದುಪಡಿ ವಿಧೆಯಕವನ್ನು ತರಾತರಿಯಲ್ಲಿ ಸರಕಾರ ಜಾರಿಗೆ ತರಲು ಹೊರಟಿರುವುದು ಏಕೆ ಎಂಬುದು ತಮಗೆ ಅರಿವಾಗುತ್ತಿಲ್ಲ. ಇದು ಹಾಲಿ ಸನ್ನಿವೇಶದಲ್ಲಿ ಬೇಕಿತ್ತೇ ಎಂದು ಜೆ. ಡಿಎಸ್ ನಾಯಕ ಹೆಚ್ ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ವಿಧಾನನಸಭೆಯಲ್ಲಿ ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು , ಕೊರೋನಾ ಸನ್ನಿವೇಶದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಪದೆ ಪದೇ ಮನವಿ ಮೂಲಕ ಹೇಳುತ್ತಿದ್ದಾರೆ. ಆದರೆ ಇಂತಹ ವಿಷಮ ಸನ್ನಿವೇಶದಲ್ಲಿ ಇದು ಬೇಕಿತ್ತೆ ಎಂದು ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡರು.

SCROLL FOR NEXT