ಬೆಂಗಳೂರು: ರೈತರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಪ್ರತಿಪಕ್ಷಗಳು ಮಾಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು.
ಕರ್ನಾಟಕ ಬಂದ್ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು,ನಾನು ರೈತರ ಜೊತೆ ಸಭೆ ಕರೆದು ಮಾತನಾಡಿದ್ದೇನೆ.ಎಪಿಎಂಸಿ ಕಾಯ್ದೆ ತಂದಿದ್ದು ರೈತರ ಪರವಾಗಿ.ಬಹಳ ವರ್ಷಗಳ ರೈತರ ಬೇಡಿಕೆ ಈಡೇರಿಸಿದ್ದೇವೆ.ರೈತ ಮುಖಂಡರು ಇದನ್ನ ಅರಿತು ಬಂದ್ ವಾಪಸ್ ಪಡೆಯಬೇಕು.ಬಂದ್ ಗೆ ಅವಕಾಶನೂ ಇಲ್ಲ ಎಂದು ತಿಳಿಸಿದರು.
ರೈತರ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿ ಎಂದೇ ಇದನ್ನ ತಂದಿದ್ದು.ರೈತರ ಪರವಾಗಿಯೇ ಪ್ರಧಾನಿಯವರು ಇದ್ದಾರೆ. ನಮ್ಮ ಸರಕಾರ ರೈತರ ಪರ ಇದೆ.ಎಪಿಎಂಸಿ ಕಾಯ್ದೆಗೆ ಬಹಳ ರೈತರು ಬೆಂಬಲಿಸಿದ್ದಾರೆ.ರೈತರು ಗೊಂದಲಗೊ ಳ್ಳುವ ಅಗತ್ಯ ಇಲ್ಲ.ರೈತರ ಅನುಕೂಲಕ್ಕೆ ಕಾಯ್ದೆ ತಂದಿದ್ದೇವೆ.ರೈತರು ಬಂದ್ ಕರೆಯನ್ನು ಕೈಬಿಡಲಿ ಎಂದು ಮನವಿ ಮಾಡಿದರು.
ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚನೆ : ಇದೇ ವೇಳೆ ಸಿಎಂ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವು ದಾಗಿ ಘೋಷಿಸಿದರು.ಕಾಡುಗೊಲ್ಲರ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಲು ನಿರ್ಧರಿಸಲಾಗಿದೆ. ನಿಗಮ ಮೂಲಕ ಆ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ ಕೊಡ್ತೇವೆ ಎಂದರು