ರಾಜ್ಯ

ವಿದ್ಯುತ್ ದರ ಹೆಚ್ಚಿಸಲು ಇದು ಸರಿಯಾದ ಸಮಯವಲ್ಲ: ತಜ್ಞರು

Nagaraja AB

ಬೆಂಗಳೂರು: ಕರ್ನಾಟಕದ ವಿವಿಧ ಎಸ್ಕಾಂಗಳು (ವಿದ್ಯುತ್ ಸರಬರಾಜು ಕಂಪನಿಗಳು) ವಿದ್ಯುತ್ ದರವನ್ನು ಆದಷ್ಟು ಬೇಗ ಪರಿಷ್ಕರಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವನ್ನು ಕೋರಿವೆ.ಆದರೆ, ಉತ್ತಮ ಮಳೆಗಾಲ ಮತ್ತು ಸಾಂಕ್ರಾಮಿಕ ಕಾಯಿಲೆ ವಿದ್ಯುತ್ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಬೀರಿದ್ದು, ದರ ಪರಿಷ್ಕರಣೆ ದುಸ್ಸಾಹಸ ಎಂದು ಕೆಲ ತಜ್ಞರು ಮತ್ತು ಹಿರಿಯ ವಿದ್ಯುತ್ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್ ಇಲಾಖೆ ಮತ್ತು ಕೆಇಆರ್‌ಸಿ ಹೊಸ ನೀತಿಗಳು ಮತ್ತು ವ್ಯವಸ್ಥಿತ ತಿದ್ದುಪಡಿಗಳ ಮೇಲೆ ಕೆಲಸ ಮಾಡುವುದರಿಂದ ಆರ್ಥಿಕತೆಯ ವೇಗವಾಗಿ ಪುನರುಜ್ಜೀವನಗೊಳ್ಳುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕೆಇಆರ್ ಸಿ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಿ, ಏಪ್ರಿಲ್ ತಿಂಗಳಲ್ಲಿ ಜಾರಿಗೆ ಬರುತಿತ್ತು. ಆದರೆ, ಈ ವರ್ಷ ಸಾಂಕ್ರಾಮಿಕ ಕಾಯಿಲೆ ಮತ್ತು ಲಾಕ್ ಡೌನ್ ನಿಂದಾಗಿ ಅದು ವಿಳಂಬವಾಗಿದೆ.

2019ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಖರೀದಿಗಾಗಿ 2,295 ಕೋಟಿ ಹಂಚಿಕೆ ಮಾಡಲಾಗಿತ್ತು.  ಮೇ ತಿಂಗಳಲ್ಲಿ ವಿದ್ಯುತ್ ಹಂಚಿಕೆಯನ್ನು ಪರಿಷ್ಕರಣೆ  ಮಾಡಬೇಕಿತ್ತು ಎಂದು ಕೆಇಆರ್ ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಕೆಇಆರ್ ಸಿ ದರ ಪರಿಷ್ಕರಿಸುವ ಸಮಯ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಕಾನೂನು ಮತ್ತು ಆರ್ಥಿಕ ಅಡಚಣೆಯನ್ನು ಹೇಳುತ್ತಾರೆ. ಇನ್ನೂ ಕೆಲವರು ಕೆಪಿಟಿಸಿಎಲ್  ಮತ್ತು ಕೆಇಆರ್ ಸಿ ನಡುವೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯೇ ವಿಳಂಬಕ್ಕೆ ಕಾರಣ ಎನ್ನುತ್ತಾರೆ.

ಎಸ್ಕಾಂ ಆದಾಯ ಕೊರತೆಯಿಂದ ಬಳಲುತ್ತಿದೆ ಆದರೆ, ಯಾರು ವಿದ್ಯುತ್ ಖರೀದಿಸುತ್ತಾರೆ. ದೊಡ್ಡದಾಗಿ ವಿದ್ಯುತ್ ಖರೀದಿದಾರರು ಕೈಗಾರಿಕಾ ಘಟಕಗಳು , ಆದರೆ, ಅವುಗಳು ಐದು ತಿಂಗಳುಗಳಿಂದ ಮುಚ್ಚಿದ್ದು, ಅವುಗಳು ಪುನರುಜ್ಜೀವನಗೊಳ್ಳಲು ವರ್ಷಗಳೇ ಬೇಕಾಗಲಿದೆ ಎಂದು ಹೇಳುವ ಎಫ್ ಕೆಸಿಸಿಐನ ವಿದ್ಯುತ್ ತಜ್ಞ ಎಂ. ಜಿ. ಪ್ರಭಾಕರ್, ಈ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಳ ಉತ್ತಮವಲ್ಲ ಎನ್ನುತ್ತಾರೆ.

SCROLL FOR NEXT