ರಾಜ್ಯ

ಮೈಸೂರಿನ ಕೆಲವು ಸ್ಥಳಗಳಿಗೆ ಹೋಗಬಯಸುವವರಿಗೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ!

Nagaraja AB

ಮೈಸೂರು: ಮೈಸೂರಿನ ಕೆಲವು ಸ್ಥಳಗಳಿಗೆ ಹೋಗ ಬಯಸುವವರಿಗೆ ಕೋವಿಡ್-19 ನೆಗೆಟಿವ್ ವರದಿ (ಕಳೆದ 72 ಗಂಟೆಯೊಳಗಿನ) ಹೊಂದಿರುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. 

ಪ್ರವಾಸಿ ಸ್ಥಳಗಳು, ರೆಸಾರ್ಟ್ ಗಳು, ಕನ್ವೆನ್ ಷನ್ ಹಾಲ್, ಪಾರ್ಟಿ ಹಾಲ್, ರೀಕ್ರೇಷನ್ ಕ್ಲಬ್ಸ್, ಚಿತ್ರಮಂದಿರಗಳಲ್ಲಿ ಕೋವಿಡ್-19 ನೆಗೆಟಿವ್ ವರದಿಯನ್ನು ಪರಿಶೀಲಿಸಿದ ನಂತರ ಪ್ರವೇಶಕ್ಕೆ ಅನುಮತಿ ನೀಡಲು ಕ್ರಮ ವಹಿಸತಕ್ಕದ್ದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮಾಲೀಕರೇ ಜವಾಬ್ದಾರರಾಗಿರುತ್ತಾರೆ. ಅಲ್ಲದೇ, ಕೋವಿಡ್ - ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಮುಚ್ಚಲಾಗುವುದು, ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 188 ಹಾಗೂ ರಾಜ್ಯ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ವಿಭಾಗ 4,5,8,10 ಮತ್ತು 13 ರಂತೆ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಶನಿವಾರದಿಂದ ಇದೇ ತಿಂಗಳ 20ನೇ ತಾರೀಖಿನವರೆಗೂ ಹತ್ತು ದಿನಗಳ ಕಾಲ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

SCROLL FOR NEXT