ರಾಜ್ಯ

ಅಬಕಾರಿ ಇಲಾಖೆಯಿಂದ ಕಳೆದ 9 ತಿಂಗಳಲ್ಲಿ ದಿನಕ್ಕೆ 45 ದಾಳಿ

Shilpa D

ಬೆಂಗಳೂರು: ಅಕ್ರಮ ಮಧ್ಯಘಟಕಗಳ ಮೇಲೆ ಅಬಕಾರಿ ಇಲಾಖೆಯು 2020ರ ಜುಲೈನಿಂದ ದಿನಕ್ಕೆ ಸರಾಸರಿ 45ದಾಳಿ ನಡೆಸಿದೆ.

ದಾಳಿ ನಡೆಸಿದ ನಂತರ ಅಧಿಕಾರಿಗಳಿಗೆ ಬೆದರಿಕೆ ಕರೆ ಬರಲು ಆರಂಭವಾಗಿದೆ, ಹೀಗಾಗಿ ಸಿಬ್ಬಂದಿಗೆ ಬಂದೂಕು ಬಳಕೆ ಮಾಡಲು ತರಬೇತಿ ನೀಡಲು ಯೋಜನೆ ನಡೆಸುತ್ತಿದೆ. ಜೊತೆಗೆ ದಾಳಿಗೆ ಹೆಚ್ಚಿನ ವಾಹನ ಮತ್ತು ಗನ್ ಗಳನ್ನು ನೀಡಲು ನಿರ್ಧರಿಸಿದೆ.

ಈ ವರ್ಷ 25 ಸಾವಿರ ಕೋಟಿ ರು ಆದಾಯ ಗಳಿಸಲು ಇಲಾಖೆ ಟಾರ್ಗೆಟ್ ಮಾಡಲಾಗಿದೆ. ನಡೆಸಿದ ಯಶಸ್ವಿ ದಾಳಿಗಳ ಸಂಖ್ಯೆಯಿಂದ ಆದಾಯ ಹೆಚ್ಚಲು ಸಹಾಯವಾಗುತ್ತದೆ. 2020-21ರ ಏಪ್ರಿಲ್ ವರೆಗೆ ಲಾಕ್ ಡೌನ್ ಇದ್ದ ಕಾರಣ ಮಧ್ಯ ಮಾರಾಟ ಇರಲಿಲ್ಲ, ಹೀಗಾಗಿ ಜುಲೈನಲ್ಲಿ ದಾಳಿ ಪ್ರಾರಂಭವಾಯಿತು.

ಕಳೆದ 9 ತಿಂಗಳಲ್ಲಿ 13, 191 ದಾಳಿ ನಡೆದಿದ್ದು, 182 ಮಂದಿಯನ್ನು ಬಂಧಿಸಲಾಗಿದೆ, ಸಾವಿರಾರು ಲೀಟರ್ ಮಧ್ಯ ವಶಪಡಿಸಿಕೊಳ್ಳಲಾಗಿದೆ, 110 ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದಿ ದಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರಕಿದ ಮಾಹಿತಿಯಲ್ಲಿ ತಿಳಿದು ಬಂದಿದೆ.

ಕಳೆದ ವರ್ಷ 431 ಕೋಟಿ ರೂ.ಗಳನ್ನು ಗುರಿ ತಲುಪಿವೆ ಎಂದು ಇಲಾಖೆ  ಮೂಲಗಳು ತಿಳಿಸಿವೆ ಮತ್ತು ಈ ವರ್ಷ ಅವರು 25,000 ಕೋಟಿ ರೂ. ಟಾರ್ಗೆಟ್ ಹೊಂದಿದೆ. ಇದಕ್ಕಾಗಿ ನಾವು ಸರ್ಕಾರಕ್ಕೆ ತೆರಿಗೆ ಪಾವತಿಸುವುದನ್ನು ತಪ್ಪಿಸುತ್ತಿರುವ ಅಕ್ರಮ ಮದ್ಯ ಘಟಕಗಳ ಮೇಲೆ ನಿಗಾ ಇಡಬೇಕು, ನಾವು ಖಂಡಿತವಾಗಿಯೂ ಕಳೆದ ವರ್ಷಕ್ಕಿಂತ ಹೆಚ್ಚಿನ ದಾಳಿಗಳನ್ನು ನಡೆಸುತ್ತೇವೆ’’ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆಯ. ಆದರೆ ಅನೇಕ ಸ್ಥಳಗಳಲ್ಲಿ, ಬಂದೂಕುಗಳನ್ನು ಹೊತ್ತುಕೊಳ್ಳದ ಇಲಾಖೆಯ ಅಧಿಕಾರಿಗಳು, ಅಕ್ರಮ ಘಟಕಗಳ ಸಿಬ್ಬಂದಿಯಿಂದ ಬೆದರಿಕೆ ಹಾಕಿದ ನಂತರ ದಾಳಿ ನಡೆಸದೆ ಹಿಂದಿರುಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಲಾಖೆ ಬಳಿ ಈಗ ಕೆಲವು ಹಳೆಯ ಬಂದೂಕುಗಳಿದ್ದು ಅವರು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. "ಇದಕ್ಕಾಗಿಯೇ ಆರೋಪಿಗಳು ಇಲಾಖೆಯ ಅಧಿಕಾರಿಗಳಿಗೆ ಹೆದರುವುದಿಲ್ಲ" ಎಂದು ಮೂಲಗಳು ತಿಳಿಸಿವೆ.

ಹಲವು ವೇಳೆ ದಾಳಿಯ ಸಮಯದಲ್ಲಿ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ, ನಮ್ಮ ಅಧಿಕಾರಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವಂತೆ ಪೊಲೀಸ್ ಇಲಾಖೆಯನ್ನು ಕೇಳಲು ನಿರ್ಧರಿಸಿದ್ದೇವೆ, ಈ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಲಾಗುವುದು ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಬಂದೂಕು ನೀಡಲಾಗುವುದು. ಇನ್ಸ್ಪೆಕ್ಟರ್ಗಳು ಮತ್ತು ಇತರ ಅಧಿಕಾರಿಗಳಿಗಾಗಿ 77 ಜೀಪ್ ಮತ್ತು 300 ಮೋಟಾರು ಬೈಕುಗಳನ್ನು ಇಲಾಖೆ ಖರೀದಿಸುತ್ತಿದೆ ಎಂದು ಹೇಳಿದ್ದಾರೆ. 

SCROLL FOR NEXT