ರಾಜ್ಯ

ಧರ್ಮಸ್ಥಳಕ್ಕೆ ಆಗಮಿಸಿದ್ದ ಭಕ್ತರಿಂದ 3.2 ಲಕ್ಷ ಮೌಲ್ಯದ ಚಿನ್ನ ಕಳವು: ಇಬ್ಬರು ಆರೋಪಿಗಳ ಬಂಧನ

Raghavendra Adiga

ಬೆಳ್ತಂಗಡಿ: ಧರ್ಮಸ್ಥಳ ಪಿಎಸ್‌ಐ ಪವನ್ ನಾಯಕ್ ಮತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಂದ 3.2 ಲಕ್ಷ ರೂ.ಗಳ ಚಿನ್ನದ ಆಭರಣಗಳನ್ನು ಹೊಂದಿರುವ ಚೀಲವನ್ನು ದೋಚಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಗದಗದ ಅಸುಂಡಿ ಗ್ರಾಮದ ಸಿದ್ದಾರ್ಥ್ (26) ಮತ್ತು ದ್ರಾಕ್ಷಾಯಿನಿ ಕೊರಚರ (26) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ನೋಂದಣಿ ಸಂಖ್ಯೆ 51 ಎ 4048ಯ ಇನ್ನೋವಾ ಕಾರು ಹಾಗೂ ಕದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

36 ವರ್ಷದ ಶಿರಸಿ ನಿವಾಸಿ ಕಲ್ಪನಾ ಚಂದ್ರಶೇಖರ್ ನಾಯಕ್ಏಪ್ರಿಲ್ 1 ರಂದು ಬೆಳಿಗ್ಗೆ 7 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬೆಳಿಗ್ಗೆ 7.30 ರ ಸುಮಾರಿಗೆ ಕಲ್ಪನಾಳ ತಾಯಿ ಭವಾನಿ ದೇವಾಲಯದ ಹೊರಗೆ ಚೀಲದೊಂದಿಗೆ ನಿಂತಿದ್ದಾಗ ಕಳ್ಳರು ಅದನ್ನು ಕಿತ್ತು ಪರಾರಿಯಾಗಿದ್ದಾರೆ. ಚೀಲದಲ್ಲಿ ಗಣೇಶ ಪೆಂಡೆಂಟ್, 40 ಗ್ರಾಂ ತೂಕದ ಚಿನ್ನದ ಕಂಕಣ ಮತ್ತು ಇತರೆ ಆಭರಣಗಳಿತ್ತು ಚೀಲದಲ್ಲಿದ್ದ ಚಿನ್ನದ ತೂಕ 85 ಗ್ರಾಂ ಮತ್ತು ಅದರ ಮೌಲ್ಯ 3.2 ಲಕ್ಷ ರೂ. ಆಗಿತ್ತು.

ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಧ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕೋರ್ಟ್ ಅವರಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

SCROLL FOR NEXT