ರಾಜ್ಯ

ಸರ್ಕಾರಿ ರಜೆ ದಿನಗಳಲ್ಲೂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಿ: ಚು.ಆಯೋಗಕ್ಕೆ ಡಿಕೆಶಿ ಪತ್ರ

Manjula VN

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರಿ ರಜೆ ದಿನಗಳಲ್ಲೂ ನಾಮಪತ್ರ ಸಲ್ಲಿಸಲು ಅವಕಾಶ ನೀಡಿ ಎಂದು ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ರ ಬರೆದಿದ್ದಾರೆ. 

ರಜಾ ದಿನವಾದ ಏ.13 ಮತ್ತು 14 ರಂದು ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲು ಡಿ.ಕೆ.ಶಿವಕುಮಾರ್‌ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ, ರಾಜ್ಯದ 8 ಜಿಲ್ಲೆಗಳ 10 ನಗರ ಸ್ಥಳೀಯ ಸಂಸ್ಥೆಗಳ 266 ವಾರ್ಡ್‌ಗಳಿಗೆ ನಿಗದಿಯಾಗಿರುವ ಚುನಾವಣೆಗೆ ಏ.15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನಾಮಪತ್ರ ಸಲ್ಲಿಕೆಗೆ 8 ದಿನ ಕಾಲಾವಕಾಶ ಇದ್ದರೂ ಅದರಲ್ಲಿ 4 ದಿನ ಸಾರ್ವತ್ರಿಕ ರಜಾ ದಿನ ಇರುತ್ತದೆ. ಹೀಗಾಗಿ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಳಿಗೆ ನಾಮಪತ್ರ ಸಲ್ಲಿಸಲು ಸಾಕಷ್ಟು ಕಾಲಾವಕಾಶ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರ ಸೂಕ್ಷ್ಮವಾಗಿದ್ದು ಏ.13 ಮತ್ತು 14 ರಂದು ಸಹ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ. 1 ಮಹಾನಗರ ಪಾಲಿಕೆ, 5 ನಗರಸಭೆ, 2 ಪುರಸಭೆ, 2 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ.

SCROLL FOR NEXT