ರಾಜ್ಯ

ಬೆಂಗಳೂರಿನಲ್ಲಿ ಅಂತರರಾಜ್ಯ ಡ್ರಗ್ಸ್ ಮಾರಾಟ ಜಾಲ: ನಾಲ್ವರ ಸೆರೆ, 60 ಲಕ್ಷ ರೂ. ಮೌಲ್ಯದ ಮಾದಕವಸ್ತು ವಶ

Raghavendra Adiga

ಬೆಂಗಳೂರು: ಮಾದಕವಸ್ತು ಮಾರಾಟಗಾರರ ಅಂತರರಾಜ್ಯ ಗ್ಯಾಂಗ್‌ನ ನಾಲ್ವರು ಸದಸ್ಯರನ್ನು ಪೊಲೀಸರು ಬಂಧಿಸಿ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಹಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ.

ವಶಕ್ಕೆ ಪಡೆಯಲಾದ ವಸ್ತುಗಳಲ್ಲಿ 48 ಕೆಜಿ 189 ಗ್ರಾಂ ಗಾಂಜಾ (ಮೌಲ್ಯ 15 ಲಕ್ಷ ರೂ.) ಮತ್ತು 45 ಲಕ್ಷ ರೂ ಮೌಲ್ಯದ 1 ಕೆಜಿ 134 ಗ್ರಾಂ ಹಶೀಶ್ ಆಯಿಲ್, ಒಂದು ಐಷಾರಾಮಿ ಬಸ್, ತೂಕದ ಯಂತ್ರ ಮತ್ತು 4,700 ರೂ. ನಗದು ಸೇರಿದೆ.

ಬಂಧಿತರನ್ನು ಗುಡಿಗೇರಿ ಹೌಸ್, ಕಾಸರಗೋಡಿನ ಮೊಹಮ್ಮದ್ ಮುಸ್ತಾಕ್, ಬಂಟ್ವಾಳದ ಪಿ ಸಮೀರ್, ಉಪ್ಪಳ ಗ್ರಾಮದ ಕೊಡಿಬಿಯಾಲ್ ಹೌಸ್ ನ ಮೊಹಮ್ಮದ್ ಆಶಿಕ್ ಎಂದು ಗುರುತಿಸಲಾಗಿದೆ. ಇನ್ನೋರ್ವನ ಹೆಸರು ಬಹಿರಂಗಪಡಿಸಿಲ್ಲ.

ಗ್ಯಾಂಗ್ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ನಡೆಸುತ್ತಿತ್ತು. ಎಚ್‌ಎಸ್‌ಆರ್ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT