ರಾಜ್ಯ

ಇಂದಿನಿಂದ ರಂಜಾನ್‌ ಆಚರಣೆ: ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಟ

Shilpa D

ಬೆಂಗಳೂರು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭವಾಗಿದೆ. ಒಂದು ತಿಂಗಳ ಕಾಲ ಈ ಆಚರಣೆ ಇರಲಿದ್ದು, ಕೋವಿಡ್ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಪ್ರಾರ್ಥನೆಗೆ ಐದು ನಿಮಿಷ ಮೊದಲು ಮಸೀದಿ ಓಪನ್ ಮಾಡಬೇಕು. ಕಂಟೈನ್ಮೆಂಟ್ ಜೋನ್ ಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ನಮಾಜ್‌ ಮಾಡಲು ಸ್ವಂತ ಚಾದರ್‌ ತರಬೇಕು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಎರಡು ಮೀಟರ್ ನಷ್ಟು ಅಂತರ ಕಾಪಾಡಬೇಕು. ಇಫ್ತಾರ್‌ ಕೂಟ ನಡೆಸುವಂತಿಲ್ಲ, ಸಮಾಜ್‌ಗೂ ಮುನ್ನ ಐದು ನಿಮಿಷ ಮಸೀದಿ ತೆರೆಯುವುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ.

ಉಪವಾಸ ಬಿಡುವಾಗ ಸಹ ಮಸೀದಿಗೆ ಆಹಾರ ವಸ್ತು ತರಬಾರದು, ಉಪವಾಸವನ್ನು ಮನೆಯಲ್ಲಿಯೇ ಬಿಡಬೇಕು. ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಮಸೀದಿಗೆ ಬರುವಾಗ ಸರತಿ ಅನುಸರಿಸಬೇಕು, ಮಾಸ್ಕ್‌ ಕಡ್ಡಾಯ, ಪ್ರತಿ ಹೊತ್ತಿನ ನಮಾಜ್‌ ಬಳಿಕ ಸ್ಯಾನಿಟೈಸರ್‌ ಅಳವಡಿಕೆ ಕಡ್ಡಾಯವಾಗಿದೆ. ಅಲ್ಲದೆ 60 ವರ್ಷ ಮೇಲ್ಪಟ್ಟವರು, ಮಕ್ಕಳು ಮಸೀದಿಗೆ ಬರುವಂತಿಲ್ಲ ಎಂದು ಮಾಗಸೂಚಿಯಲ್ಲಿ ತಿಳಿಸಲಾಗಿದೆ.

ಇಫ್ತಾರ್‌ಗಳನ್ನು ಮನೆಯಲ್ಲೇ ಮಾಡಿಕೊಳ್ಳಬೇಕು, ಸಾಮಾಜಿಕ ಅಂತರ, ಮಾಸ್ಕ್‌ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸಿ ಮಸೀದಿಗಳಲ್ಲಿ ನಮಾಜ್‌ ಮಾಡಬಹುದಾಗಿದೆ. ಆದರೆ ಪ್ರಾರ್ಥನೆ ಕೂಗುವ ಐದು ನಿಮಿಷಗಳ ಮೊದಲು ಮಸೀದಿ ತೆರೆಯಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

SCROLL FOR NEXT