ರಾಜ್ಯ

ಕಾಳೀಮಠ ದ್ವೀಪಕ್ಕೆ ದೋಣಿ ವಿಹಾರ, ಮಾವಿನ ತೋಪುಗಳಲ್ಲಿ ಸುತ್ತಾಟ: ಕಾರವಾರದಲ್ಲಿನ ಹೊಸ ಆಕರ್ಷಣೆ! 

Shilpa D

ಕಾರವಾರ: ಉತ್ತರಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರು ಈಗ ಕಾರವಾರ ಸುತ್ತಮುತ್ತಲಿನ ದ್ವೀಪಗಳಿಗೆ ಭೇಟಿ ನೀಡಬಹುದು  ಹಾಗೂ ಪ್ರೀಮಿಯಂ ಕ್ರೂಸ್ ಪ್ಯಾಕೇಜಿನ ಭಾಗವಾಗಿ ಕಾಳೀಮಠ ದ್ವೀಪದಲ್ಲಿರುವ ಮಾವಿನ ತೋಪುಗಳಿಗೂ ಹೋಗಬಹುದು.

ಕೇರಳ ಮಾದರಿಯಲ್ಲಿ ಪ್ರವಾಸೋದ್ಯಮಕ್ಕೆ ಟಚ್ ಸಿಕ್ಕಿದಂತಾಗಿದ್ದು, ಕಾರವಾರದ ಕಾಳಿ ನದಿಯಲ್ಲಿ ಕ್ರೂಸ್ ಪ್ರವಾಸಿ ಬೋಟ್ ಓಡಾಡಲಿದೆ. ಇನ್ಮುಂದೆ ಕಾರವಾರಕ್ಕೆ ಬರುವ ಪ್ರವಾಸಿಗರು ವಿನೂತನ ಶೈಲಿಯ ಬೋಟ್ ಮೂಲಕ ವಿಹಾರ ಮಾಡಿ ಕಾಲ ಕಳೆಯಬಹುದು. 

ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಶಿಖರ ಹೌಸ್ ಬೋಟ್ ಸೇರ್ಪಡೆ ಗೊಂಡಿದ್ದು ಪ್ರವಾಸೋದ್ಯಮ ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಖಾಸಗಿ ಸಹಭಾಗಿತ್ವದಲ್ಲಿ ಮುಂದಾಗಿದೆ. ಕಾರವಾರ ನಗರದ ಕಾಳಿ ರಿವರ್ ಗಾರ್ಡನ್ ವತಿಯಿಂದ ಶಿಖರ ಹೆಸರಿನ ಕ್ರೂಸ್ ಬೋಟ್ ಇನ್ಮುಂದೆ ಇಲ್ಲಿನ ನದಿ ಮತ್ತು ಸಮುದ್ರ ಸಂಗಮದಲ್ಲಿ ಓಡಾಡಲಿದೆ. 

ನಾವು ಪ್ರವಾಸಿಗರನ್ನು ರೈಲ್ವೆ ಬೀಚ್, ದೇವ್‌ಬಾಗ್ ಬೀಚ್, ಕಾಲಿಮಠ ದ್ವೀಪ ಮತ್ತು ಇತರ ದ್ವೀಪಗಳ ಸುತ್ತಲೂ ಕರೆದೊಯ್ಯುತ್ತೇವೆ. ನಾವು ಕಾಲಿಮಠ ದ್ವೀಪದಲ್ಲಿ ಮಾತ್ರ ನಿಲ್ಲಿಸುತ್ತೇವೆ,  ಪ್ರವಾಸಿಗರು ಕೆಳಗಿಳಿದು ಮ್ಯಾಂಗ್ರೋವ್‌ಗಳ ಸುತ್ತಲೂ ನಡೆಯಬಹುದು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರೋಷನ್ ಪಿಂಟೋ ಹೇಳಿದ್ದಾರೆ.

ಇದನ್ನು ಅರಣ್ಯ ಇಲಾಖೆ ಆಯೋಜಿಸಿದ್ದು ಇದರಿಂದ ಮ್ಯಾಂಗ್ರೋವ್ ಪ್ರವಾಸೋದ್ಯಮ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಪ್ರತಿ ಬೋಟ್ 25 ಮಂದಿಯನ್ನು ಕರೆದೊಯ್ಯುಲಿದೆ, 1 ಗಂಟೆಯ ವಿಹಾರಕ್ಕೆ ಒಬ್ಬ ವ್ಯಕ್ತಿಗೆ 699ರು ನಿಗದಿ ಪಡಿಸಲಾಗಿದೆ.  ವಿನೂತನ ಶೈಲಿಯ ಕ್ರೂಸ್ ಬೋಟನ್ನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಲೋಕಾರ್ಪಣೆಗೊಳಿಸಿದರು.

ಇನ್ನೂ ಕ್ರೂಸ್ ಮೂಲಕ ವಿಹರಿಸಿದರೆ ನದಿಯ ಇಕ್ಕೆಲಗಳಲ್ಲಿ ಬೆಳೆದಿರುವ ಕಾಂಡ್ಲಾವನಗಳ ಹಸಿರು ರಾಶಿಯನ್ನ ನೋಡಲು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಅಲ್ಲದೇ  ಸುತ್ತಮುತ್ತಲ ಪ್ರದೇಶಗಳನ್ನ ವೀಕ್ಷಿಸಬಹುದಾಗಿದೆ. ಕಾಳಿನದಿಯು ಕಡಲು ಸೇರುವ ಅಳಿವೆ ಪ್ರದೇಶದ ಬಳಿ ಇರುವ ಐಲ್ಯಾಂಡ್ ಬಳಿ ತೆರಳಬಹುದು. ಚರಿತ್ರಾರ್ಹವಾಗಿರುವ ಕಾಳಿಮಾತಾ ದೇವಾಲಯ, ಕಾಂಡ್ಲಾ ಬೋರ್ಡ್ ವಾಕ್ ಬಳಿ ತೆರಳಬಹುದಾಗಿದೆ.

SCROLL FOR NEXT