ರಾಜ್ಯ

ಸುಸ್ತು, ಬಳಲಿಕೆಯಲ್ಲಿರುವ ಸಿಎಂ ಯಡಿಯೂರಪ್ಪ: ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವಿಶ್ರಾಂತಿ 

Sumana Upadhyaya

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶುಕ್ರವಾರ ಬೆಂಗಳೂರಿನಲ್ಲಿರುವ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಮೊರೆಹೋಗಿದ್ದಾರೆ. 

ನಿನ್ನೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಅಂಗವಾಗಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಮಾಡಿ ಬಂದಿದ್ದರು. ಬೆಳಗಾವಿಯಲ್ಲಿರುವಾಗಲೇ ಜ್ವರ, ಸುಸ್ತು, ಬಳಲಿಕೆ ಕಂಡುಬಂದು ಹೊಟೇಲ್ನಲ್ಲಿ ಕೆಎಲ್ ಇ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದಿದ್ದರು.

ನಿನ್ನೆ ಪ್ರಚಾರ ಮಧ್ಯೆ ಅರ್ಧದಲ್ಲಿಯೇ ಮತ್ತೆ ಸುಸ್ತು, ಬಳಲಿಕೆಯಾಗಿ ಪ್ರವಾಸ ಅರ್ಧದಲ್ಲಿಯೇ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದರು.

ಇಂದು ಬೆಳಗ್ಗೆ ತಮ್ಮ ನಿವಾಸ ಕಾವೇರಿಯಲ್ಲಿ ಕೊರೋನಾಗೆ ಸಂಬಂಧಪಟ್ಟಂತೆ ತುರ್ತುಸಭೆ ನಡೆಸಿದ್ದರು. ಜ್ವರ, ಸುಸ್ತು, ಬಳಲಿಕೆ ಕಡಿಮೆಯಾಗಿರಲಿಲ್ಲ, ಹೀಗಾಗಿ ಅಲ್ಲಿಂದ ತಮ್ಮ ನಿವಾಸ ಧವಳಗಿರಿಯ ಹತ್ತಿರವಿರುವ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ನಿಗದಿತ ಆರೋಗ್ಯ ತಪಾಸಣೆಗೆ ಆಗಮಿಸಿದ ಬಿಎಸ್ ವೈ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿಯೇ ಎರಡು ದಿನಗಳ ಕಾಲ ಉಳಿದುಕೊಳ್ಳಲು ತೀರ್ಮಾನಿಸಿದ್ದಾರೆ.

ಇಂದು ಸಿಎಂ ಆರೋಗ್ಯ ನೋಡಿಕೊಂಡು ವೈದ್ಯರು ಅವರಿಗೆ ಚಿಕಿತ್ಸೆ ನೀಡಬೇಕೆ ಅಥವಾ ಕೇವಲ ವಿಶ್ರಾಂತಿ ಸಾಕೇ ಎಂದು ತೀರ್ಮಾನಿಸಲಿದ್ದಾರೆ. ಆದರೆ ಸುಸ್ತು ಕಡಿಮೆಯಾಗುವವರೆಗೆ ಮನೆಯ ಬದಲು ಆಸ್ಪತ್ರೆಯಲ್ಲಿಯೇ ಸಿಎಂ ಉಳಿದುಕೊಳ್ಳಲು ತೀರ್ಮಾನಿಸಿದ್ದಾರೆ. 

ತೀರಾ ಅಗತ್ಯವಿರುವವರು ತಮ್ಮನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಇನ್ನೆರಡು ದಿನ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರಲು ಸಿಎಂ ನಿರ್ಧರಿಸಿದ್ದಾರೆ, ಅವರಿಗೆ ಇಂದು ಕೋವಿಡ್ ಟೆಸ್ಟ್ ಕೂಡ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 

SCROLL FOR NEXT