ರಾಜ್ಯ

ಕೋವಿಡ್ ಶೀಘ್ರ ಪತ್ತೆ, ಶೀಘ್ರ ಚಿಕಿತ್ಸೆ ಪ್ರಾರಂಭಿಸಿದರೆ ಲಾಕ್ಡೌನ್ ಅವಶ್ಯಕತೆ ಇಲ್ಲ: ಅಶ್ವತ್ಥ ನಾರಾಯಣ್

Shilpa D

ಬೆಂಗಳೂರು: ಕೋವಿಡ್ ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆ ಪ್ರಾರಂಭ ಮಾಡಿದರೆ ಯಾವುದೇ ಲಾಕ್ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಉಪಮುಖ್ಯಮಂತ್ರಿಗಳೂ ಆಗಿರುವ ರಾಮನಗರ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಸ್ತುವಾರಿ ಜಿಲ್ಲೆ ರಾಮನಗರ ಜಿಲ್ಲೆಯ ವಿಚಾರವಾಗಿ ಒಂದು ವರ್ಚುವಲ್ ಸಭೆ ಮಾಡಲಾಗಿದ್ದು,ರಾಮನಗರದಲ್ಲಿ ಕೋವಿಡ್ ನಿವಾರಣೆ ಮಾಡುವುದಕ್ಕೆ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕೋವಿಡ್ ನಿರ್ವಹಣೆ ಆಗುತ್ತಿದೆ. 1100 ಪರೀಕ್ಷೆಗಳು ನಡೆದಿದ್ದು, ಕೋವಿಡ್ ಪಾಸಿಟಿವ್ ಇರುವವರಿಗೆ ಹೋಮ್ ಐಸೋಲೇಷನ್ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಎಲ್ಲರನ್ನು ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆ ಯಲ್ಲಿ ದಾಖಲು ಮಾಡಲು ಅವಕಾಶ ಇದೆ. ಯಾರಿಗಾದರೂ ಕೋವಿಡ್ ಲಕ್ಷಣಗಳು ಕಂಡರೆ ಅವರನ್ನು ತಕ್ಷಣ ಪರೀಕ್ಷಿಸಿ ವರದಿ ಕೊಡಬೇಕು ಹಾಗೂ ತಕ್ಷಣ ಚಿಕಿತ್ಸೆ ಆರಂಭಿಸಬೇಕು.

ಸೋಂಕು ಕಂಡು ಬಂದ ತಕ್ಷಣ ಪರಿಣಾಮಕಾರಿ ಚಿಕಿತ್ಸೆ ಮಾಡಬೇಕು.ಯಾವುದೇ ಸಮಸ್ಯೆ ಇಲ್ಲದೆ ಉತ್ತಮ ವಾಗಿ ನಿರ್ವಹಣೆ ಮಾಡುವುದಕ್ಕೆ ಅವಕಾಶ ಆಗುತ್ತದೆ. ಈ ಸಂಬಂಧ ಜಿಲ್ಲೆಯ ಎಲ್ಲಾ ಶಾಸಕರು, ಎಂಪಿ ಗಳ ಜೊತೆಗೆ , ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇವೆ. ಎಲ್ಲಾ ಉತ್ತಮವಾಗಿ ನಡೆಯಲಿದ್ದು ಎಲ್ಲರ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ. ಕೋವಿಡ್ ರಹಿತ ಚಿಕಿತ್ಸೆ ಸಹ ಮುಂದುವರೆಯುತ್ತಿದೆ. ಕೋವಿಡ್ ಇಲ್ಲದ ಬೇರೆ ರೋಗಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ  ನಮಗೆ ಬೇಕಾಗಿರುವ ಬೆಡ್ಸ್ ರಾಜರಾಜೇಶ್ವರಿ ಆಸ್ಪತ್ರೆ, ದಯಾನಂದ ಸಾಗರ್ ಆಸ್ಪತ್ರೆ ಯಲ್ಲಿ ಬೆಡ್ ಇವೆ. ತುರ್ತು ಪತ್ತೆ ತುರ್ತು ಚಕಿತ್ಸೆ ನೀಡಿದರೆ ಲಾಕ್ ಡೌನ್ ಮಾಡುವ ಅವಶ್ಯಕತೆ  ಇಲ್ಲ, ಜೀವ ಮತ್ತು ಜೀವನಾಂಶ ಮುಖ್ಯ ಎಂದರು.

ಕೋವಿಡ್ ಕಳೆದ ಒಂದು ವರ್ಷದಿಂದ ನಮ್ಮ ಪ್ರಕೃತಿಯಲ್ಲಿ ಇದೆ. ನಮ್ಮ ಸಿಎಂ , ಸರ್ಕಾರ ಈ ಎಲ್ಲವನ್ನು ವಿವರಿಸಿದೆ.ಎಲ್ಲರೂ ಸುರಕ್ಷಿತವಾಗಿ ಇರಬೇಕು ಜೀವ ರಕ್ಷಣೆ ಮಾಡುವುದು ನಮ್ಮ ಮೊದಲ ಆದ್ಯತೆ.ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿಎಂ ಎಲ್ಲವನ್ನು ಸ್ಪಷ್ಟವಾಗಿ ಹೇಳಿರುವುದಾಗಿ ಅಶ್ವತ್ಥ್ ನಾರಾಯಣ್ ತಿಳಿಸಿದರು.

ಐಟಿ , ಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನಿಂದ ಹಲವಾರು ಉದ್ಯಮಿಗಳಿಗೆ ನಷ್ಟವಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ್, ಕೋವಿಡ್ ಬಂದ ಮೇಲೆ ಕೆಲಸದ ರೀತಿ ಬದಲಾವಣೆ ಆಗಿದೆ.ಆದರೆ‌ ಎಲ್ಲಾ ಸೌಲಭ್ಯಗಳು ಅವರ ಬೆರಳಿನ ತುದಿಯಲ್ಲಿ ಇದೆ. 

ವರ್ಚುವಲ್ ವರ್ಡ್ ಜೊತೆಗೆ ಫಿಸಿಕಲ್ ವರ್ಡ್ ಕೂಡ ಇರುತ್ತದೆ.ವಾರಕ್ಕೆ ಎರಡು ಮೂರು ದಿನ ಬರುವ ವ್ಯವಸ್ಥೆ ಇದೆ.ಐಟಿ ಬಿಟಿ ಕಂಪನಿಗಳು ಈ ಸಂಬಂಧ ನಿರ್ಧಾರವನ್ನು ಮಾಡಿಕೊಳ್ಳುತ್ತವೆ ಎಂದು ಸಚಿವರು ತಿಳಿಸಿದರು.

SCROLL FOR NEXT