ರಾಜ್ಯ

'ಮೈ ಲಾರ್ಡ್' ವಿಪರೀತವಾಯಿತು, ಸರ್ ಎಂದು ಸಂಬೋಧಿಸಿ: ವಕೀಲರಿಗೆ ಜಡ್ಜ್ ಸೂಚನೆ

Shilpa D

ಬೆಂಗಳೂರು: ಮೈ ಲಾರ್ಡ್ ಅಥವಾ ಲಾರ್ಡ್ ಶಿಪ್ ಎಂದು ತಮ್ಮನ್ನು ಸಂಬೋಧಿಸಬೇಡಿ, ಬದಲಿಗೆ ಸರ್ ಎಂಬ ಪದವನ್ನು ಬಳಸಿ ಎಂದು ನ್ಯಾಯಾಂಗ ಅಧಿಕಾರಿಗಳಿಗೆ ನ್ಯಾಯಮೂರ್ತಿ ಪಿ.ಕೃಷ್ಣಭಟ್ ಹೇಳಿದ್ದಾರೆ.

ಈ ಸಂಬಂಧ ಶುಕ್ರವಾರ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಲಾಗಿದೆ, ಭಾರತೀಯ ರೀತಿಯಲ್ಲಿ ವ್ಯವಹರಿಸಲು ವಕೀಲರಿಗೆ ಸೂಚಿಸಲಾಗಿದೆ.

'ಮೈ ಲಾರ್ಡ್' ಅಥವಾ 'ಯುವರ್ ಲಾರ್ಡ್ ಶಿಪ್' ನಂತಹ ವಿಪರೀತ ಗೌರವಗಳೊಂದಿಗೆ ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡುವುದನ್ನು ತಪ್ಪಿಸಲು ವಕೀಲರಿಗೆ ಕೋರಲಾಗಿದೆ, ಆದರೆ ಭಾರತೀಯ ಪರಿಸ್ಥಿತಿಗಳಲ್ಲಿ ಹೆಚ್ಚು ಸೂಕ್ತವಾದ ನ್ಯಾಯಾಲಯದ ಘನತೆ ಮತ್ತು ಗೌರವಕ್ಕೆ ಅನುಗುಣವಾಗುವಂತೆ ಸರ್ ಎಂದು ಸಂಬೋಧಿಸಲು ತಿಳಿಸಲಾಗಿದೆ.

ಬೆಳಗ್ಗೆ 10.30ಕ್ಕೆ ನ್ಯಾಯಾಲಯ ಆರಂಭವಾದಾಗ ನ್ಯಾಯಾಧೀಶ ಪಿ.ಕೃಷ್ಣ ಭಟ್ ತಮ್ಮನ್ನು ಸರ್ ಎಂದು ಸಂಬೋಧಿಸಲು ಮೌಖಿಕವಾಗಿ ವಕೀಲರಿಗೆ ತಿಳಿಸಿದರು.

ಮೇ 21 2020 ರಂದು ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು, ಅದಕ್ಕೂ ಮೊದಲು ಅವರು ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದರು.

SCROLL FOR NEXT