ರಾಜ್ಯ

ಕೋವಿಡ್-19: ರೈಲು ನಿಲ್ದಾಣದಲ್ಲಿ ಜನಸಂದಣಿಗೆ ಬ್ರೇಕ್ ಹಾಕಲು ಪ್ಲಾಟ್‌ ಫಾರಂ ಟಿಕೆಟ್‌ ದರ ಏರಿಕೆ

Srinivasamurthy VN

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಜನಸಂದಣಿ ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ಎಲ್ಲ ನಾಲ್ಕೂ ನಿಲ್ದಾಣಗಳಲ್ಲಿನ ಪ್ಲಾಟ್‌ ಫಾರಂ ಟಿಕೆಟ್‌ ದರವನ್ನು ಏರಿಕೆ ಮಾಡಿ ದಕ್ಷಿಣ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

ಟಿಕೆಟ್‌ ಕೌಂಟರ್‌ಗಳ ಮುಂದೆ ಹಾಗೂ ಪ್ಲಾಟ್‌ ಫಾರಂಗಳಲ್ಲಿ ಹೆಚ್ಚು ಜನ ಸೇರುವುದನ್ನು ತಡೆಯುವ ಉದ್ದೇಶದಿಂದ ರೈಲ್ವೆ ಇಲಾಖೆಯು ಪ್ಲಾಟ್‌ ಫಾರಂ ಟಿಕೆಟ್‌ ದರವನ್ನು ರೂ. 10 ರಿಂದ ರೂ. 50ಕ್ಕೆ ಹೆಚ್ಚಿಸಿದೆ. ಬೆಂಗಳೂರು ನಗರದ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಇದೇ 17 ರಿಂದ 30 ರವರೆಗೆ ಇದು ಜಾರಿಯಲ್ಲಿರಲಿದೆ.

'ಪ್ಲಾಟ್‌ ಫಾರಂ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇವುಗಳನ್ನು ಕೊಳ್ಳಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ದರ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಕೃಷ್ಣರಾಜಪುರಂ ರೈಲ್ವೆ ನಿಲ್ದಾಣಗಳಲ್ಲಿ ಇದು ಜಾರಿಯಲ್ಲಿರಲಿದೆ' ಎಂದು ದಕ್ಷಿಣ ರೈಲ್ವೆಯ ಬೆಂಗಳೂರು ವಿಭಾಗದ ಪ್ರಕಟಣೆ ತಿಳಿಸಿದೆ.

ರೈಲು ನಿಲ್ದಾಣದಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ
ಅಂತೆಯೇ ರೈಲುಗಳಲ್ಲಿ ಸಂಚರಿಸುವವರು ಹಾಗೂ ರೈಲು ಆವರಣದಲ್ಲಿರುವವರು ಮುಖ ಗವಸು ಧರಿಸದಿದ್ದರೆ, 500 ರೂಪಾಯಿವರೆಗೂ ದಂಡ ವಿಧಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಎಚ್ಚರಿಸಿದೆ.

SCROLL FOR NEXT