ರಾಜ್ಯ

ಕುಶಲಕರ್ಮಿಗಳಿಗೆ ವಸತಿ ಸಮುಚ್ಚಯ ನಿರ್ಮಿಸಲು ಸರ್ಕಾರದ ಪ್ರಸ್ತಾವನೆ

Shilpa D

ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಎಸ್‌ಎಚ್‌ಡಿಸಿ) ಈ ಕುಶಲಕರ್ಮಿಗಳಿಗೆ ವಸತಿ ಸಮುಚ್ಛಯ ನಿರ್ಮಿಸುವ ಆಲೋಚನೆಯೊಂದಿಗೆ ಬಂದಿದೆ.

ಏಕೆಂದರೆ ರಾಜ್ಯಾದ್ಯಂತ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮನೆ ನಿರ್ಮಾಣ ಮಾಡಲು ಭೂಮಿಯ ಕೊರತೆಯಿದೆ, ಹೀಗಾಗಿ ವಸತಿ ಸಮುಚ್ಛಯ ನಿರ್ಮಿಸಲು ಮುಂದಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ವಸತಿ ಯೋಜನೆಗಳಿಗೆ ಭೂಮಿ ಶೋಧ ನಡೆಸುವುದು ಕಷ್ಟದ ಕೆಲಸವಾಗಿದೆ, ಹೀಗಾಗಿ ಅಪಾರ್ಟ್ ಮೆಂಟ್ ರೀತಿಯ ವಸತಿ ಸಮುಚ್ಛಯ ನಿರ್ಮಿಸಲು ಮುಂದಾಗಿದೆ. 

ಮೈಸೂರು, ಸಿರಸಿ, ಸಾಗರ, ಬೀದರ್, ಶಿವಮೊಗ್ಗ, ಬೆಂಗಳೂರು ಮತ್ತು ಚನ್ನಪಟ್ಟಣ ಸೇರಿದಂತೆ 12 ಪ್ರದೇಶಗಳಲ್ಲಿ ಕರಕುಶಲ ಸಂಕೀರ್ಣ ಕ್ಲಸ್ಟರ್‌ಗಳನ್ನು ರಾಜ್ಯ ಹೊಂದಿದೆ, ಅಲ್ಲಿ ವಸತಿ  ಸಂಕೀರ್ಣಗಳನ್ನು ಸಹ ನಿರ್ಮಿಸಬಹುದಾಗಿದೆ. ಈಗಾಗಲೇ ಅಧಿಕಾರಿಗಳು ಜವಳಿ ಇಲಾಖೆಯನ್ನು ಸಂಪರ್ಕಿಸಿದ್ದು, ಅದರ ಅಡಿಯಲ್ಲಿ  ಲಭ್ಯವಿರುವ ಯೋಜನೆಗಳನ್ನು ಪರಿಗಣಿಸಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದಿದ್ದಾರೆ.

ಇಲಾಖೆ ವಸತಿ ಸಚಿವ ವಿ ಸೋಮಣ್ಣ ಅವರನ್ನು ಸಂಪರ್ಕಿಸಿದ್ದು ಉತ್ತರಕ್ಕಾಗಿ ಕಾಯುತ್ತಿದೆ.  ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ವಸತಿ ಸಮುಚ್ಛಯ ನಿರ್ಮಾಣ ಮಾಡಿಕೊಡಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ, ಯಾವ್ಯಾವ ಪ್ರದೇಶದಲ್ಲಿ ಸಮುಚ್ಚಯ ನಿರ್ಮಿಸಲು ಸಾಧ್ಯವಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ,ಕೆಎಸ್ ಎಚ್ ಡಿಸಿ ಎಂ ಡಿ ರೂಪಾ ತಿಳಿಸಿದ್ದಾರೆ.
 

SCROLL FOR NEXT