ಸಂಗ್ರಹ ಚಿತ್ರ 
ರಾಜ್ಯ

ಆನ್ ಲೈನ್ ಬೆಟ್ಟಿಂಗ್ ಶೋಕಿಗಾಗಿ ತನ್ನ ಕೆಲಸದ ಸಂಸ್ಥೆಗೇ 1.92 ಕೋಟಿ ರೂ. ಪಂಗನಾಮ: ಫಿನ್ ಟೆಕ್ ಸ್ಟಾರ್ಟ್ ಅಪ್ ಸಿಬ್ಬಂದಿ ಬಂಧನ

ತನ್ನ ಸಾಲ ಮತ್ತು ಆನ್ ಲೈನ್ ಬೆಟ್ಟಿಂಗ್ ಗಾಗಿ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಉದ್ಯೋಗಿಯೋರ್ವ ಬರೊಬ್ಬರಿ 1.92 ಕೋಟಿ ರೂ. ಹಣವನ್ನು ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ತನ್ನ ಸಾಲ ಮತ್ತು ಆನ್ ಲೈನ್ ಬೆಟ್ಟಿಂಗ್ ಗಾಗಿ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಉದ್ಯೋಗಿಯೋರ್ವ ಬರೊಬ್ಬರಿ 1.92 ಕೋಟಿ ರೂ. ಹಣವನ್ನು ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೋರಮಂಗಲದ ಫಿನ್ ಟೆಕ್ ಕ್ಯಾಷ್ ಫ್ರೀ ಪ್ರೈ.ಲಿ ನೌಕರ ಮಂಗಳೂರು ಮೂಲದ ವಿವೇಕ್ ಸಿಕ್ಕೀರಿಯಾ (33 ವರ್ಷ) ಎಂಬಾತ ಗ್ರಾಹಕರ ಖಾತೆಗೆ ವರ್ಗಾಯಿಸಬೇಕಾಗಿದ್ದ ಸುಮಾರು 1.92 ಕೋಟಿ ರೂ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಸಂಸ್ಥೆಯ ಆಂತರಿಕ ತನಿಖೆಯಲ್ಲಿ ಈ ಪ್ರಕರಣ  ಬೆಳಕಿಗೆ ಬಂದಿದ್ದು, ಈತನ ವಿರುದ್ಧ ಕಂಪನಿ ನಿರ್ದೇಶಕ ಶಿಶಿರ ಶಾಂಡಿಲ್ ಎಂಬುವವರು ಪೊಲೀಸ್ ದೂರು ನೀಡಿದ್ದಾರೆ. ಸಂಸ್ಥೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಕೋರಮಂಗಲ ಪೊಲೀಸರು ತಿಳಿಸಿದ್ದಾರೆ.

2019ರ ಜೂನ್ 24ರಲ್ಲಿ ಫಿನ್ ಟೆಕ್ ಕ್ಯಾಷ್ ಫ್ರೀ ಪ್ರೈ.ಲಿ.ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ವಿವೇಕ್ ಗೆ ಹಣಕಾಸಿನ ವಿಭಾಗದ ಜವಾಬ್ದಾರಿ ನೀಡಲಾಗಿತ್ತು. ಇದರ ನಡುವೆ 2020ರ ಜೂನ್ ನಿಂದ 2021ರ ಏಪ್ರಿಲ್ ಅವಧಿಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಿದ್ದ ಹಣವನ್ನು ತನ್ನ ಬ್ಯಾಂಕ್ ಮತ್ತು ಅನಾಮಧೇಯ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡು ಕಂಪನಿಗೆ ಮೋಸ ಮಾಡಿದ್ದಾನೆ. ತನ್ನ 2 ಮತ್ತು ಇತರರ ಮೂರು ಖಾತೆ ಸೇರಿದಂತೆ ಒಟ್ಟು ಐದು ಖಾತೆಗಳಿಗೆ ಆತ ಹಣ ಜಮೆ ಮಾಡಿದ್ದಾನೆ. ಇತ್ತೀಚಿಗೆ ನಡೆದ ಲೆಕ್ಕ ಪರಿಶೋಧನೆ ವೇಳೆ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. 

ಈಬಗ್ಗೆ ಆಂತರಿಕ ವಿಚಾರಣೆ ನಡೆಸಿದಾಗ ಹಂತಹಂತವಾಗಿ ಹಣವನ್ನು ಕದ್ದು ಅನ್ ಲೈನ್ ಬೆಟ್ಟಿಂಗ್ ನಲ್ಲಿ ತೊಡಗಿಸಿ ನಷ್ಟ ಉಂಟಾಗಿದೆ ಎಂದು ವಿವೇಕ್ ತಪ್ಪೊಪ್ಪಿಕೊಂಡಿದ್ದ. ಕಂದ ಹಣ ದುರುಪಯೋಗ ಪಡಿಸಿಕೊಂಡ ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು  ಪೊಲೀಸರು ಇಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಎಲ್ಲ ಪ್ರಯತ್ನಗಳನ್ನು ಸ್ವಾಗತಿಸಲಾಗುತ್ತದೆ': ಪುಟಿನ್ ಜೊತೆಗೆ ಪ್ರಧಾನಿ ಮೋದಿ ಮಾತುಕತೆ

SCO summit: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲೇ, ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಸ್ತಾಪಿಸಿದ ಮೋದಿ; Video

ರಷ್ಯಾದಿಂದ ತೈಲ ಖರೀದಿಸಿ 'Brahmins' ಶ್ರೀಮಂತರಾಗುತ್ತಿದ್ದಾರೆ, ಅದನ್ನು ನಿಲ್ಲಿಸಬೇಕು: White House ವ್ಯಾಪಾರ ಸಲಹೆಗಾರ ಪೀಟರ್ ನವರೊ

'ಮೂರ್ಖರಿಗೆ ಭಾಷಾವೈಶಿಷ್ಟ್ಯಗಳು ಅರ್ಥವಾಗುವುದಿಲ್ಲ': FIR ಬಗ್ಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಭಾರತದ ಸಾಮರ್ಥ್ಯ ಅರಿಯದೆ, ರಾಜಕೀಯ ಹಿನ್ನಡೆಗೆ ತುತ್ತಾದ ದೊಡ್ಡಣ್ಣ ಅಮೆರಿಕಾ! (ಜಾಗತಿಕ ಜಗಲಿ)

SCROLL FOR NEXT