ರಾಜ್ಯ

ಕೋವಿಡ್-19: ಬೆಂಗಳೂರಿಗೆ ಅಲ್ಪಾವಧಿಯ ಲಾಕ್ಡೌನ್ ಅತ್ಯಗತ್ಯ!

Srinivasamurthy VN

ಬೆಂಗಳೂರು: ಕೋವಿಡ್-19ನ ಅಲೆಯ ಬಿಗಿ ಹಿಡಿತದಲ್ಲಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪರಿಸ್ಥಿತಿ ಸುಧಾರಿಸಲು ಅಲ್ಪಾವಧಿಯ ಲಾಕ್ಡೌನ್ ಅತ್ಯಗತ್ಯ ಎಂದು ಹೊಟೆಲ್ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ಹೊಡೆತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೊಟೆಲ್ ಉದ್ಯಮ ವ್ಯಾಪಕ ಹಿನ್ನಡೆ ಅನುಭವಿಸಿದ್ದು, ಸರ್ಕಾರ ವಿಧಿಸಿರುವ ನೈಟ್ ಕರ್ಫ್ಯೂಯಿಂದಾಗಿ ಉದ್ಯಮದ ವಹಿವಾಟು ಶೇ.95ರಷ್ಟು ಕುಸಿತ ಕಂಡಿದೆ. ಹೀಗಾಗಿ ನಗರದಲ್ಲಿ ಅಲ್ಪಾವಧಿಯ ಲಾಕ್ಡೌನ್ ಜಾರಿಗೆ ತಂದು ಪರಿಸ್ಥಿತಿ ಸುಧಾರಿಸಬೇಕು ಎಂದು ರೆಸ್ಟೋರೆಂಟ್‌ಗಳು, ಪಬ್‌ಗಳು ಮತ್ತು ಬಾರ್‌ಗಳ ಮಾಲೀಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಏಪ್ರಿಲ್ 10 ರಿಂದ ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದಾಗಿನಿಂದ ವ್ಯವಹಾರಗಳು ಶೇ.95 ರಷ್ಟು ವ್ಯವಹಾರ ಕುಸಿದಿದೆ. ಇನ್ನು ಅಬಕಾರಿ ಇಲಾಖೆಯ ಪೂರ್ವಾನುಮತಿ ಇಲ್ಲದೆ ಪಬ್‌ಗಳು ಮತ್ತು ಬಾರ್‌ಗಳು ವ್ಯವಹಾರವನ್ನು ಮುಚ್ಚಲು ಸಾಧ್ಯವಿಲ್ಲ ಎಂದು ಜನಪ್ರಿಯ ಪಬ್‌ ವ್ಯಾಟ್ಸನ್‌ನ ಅಮಿತ್ ರಾಯ್ ಹೇಳಿದ್ದಾರೆ.

"ಮಾರ್ಚ್ ಎರಡನೇ ವಾರದಿಂದ ಅನೇಕ ಪಬ್‌ಗಳು ಮತ್ತು ಬಾರ್‌ಗಳಲ್ಲಿನ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕುಸಿತ ಕಾಣಲು ಆರಂಭಿಸಿದೆ. ಇದೀಗ ಅವುಗಳಲ್ಲಿ ಹೆಚ್ಚಿನ ಪಬ್‌ಗಳು ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿವೆ. ಜನರು ತಮ್ಮ ಆರೋಗ್ಯ ಮತ್ತು ಕುಸಿಯುತ್ತಿರುವ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ  ಭಯಭೀತರಾಗಿದ್ದಾರೆ. ಈ ಸಂದರ್ಭಗಳಲ್ಲಿ ವ್ಯವಹಾರ ನಡೆಸುವುದು ಕಷ್ಟಕರವಾಗುತ್ತಿದೆ. ಹೀಗಾಗಿ ತಾತ್ಕಾಲಿಕ ಲಾಕ್ಡೌನ್ ಅನ್ನು ಸರ್ಕಾರ ಘೋಷಿಸುವುದು ಉತ್ತಮ. ಇದು ಹೆಚ್ಚುತ್ತಿರುವ ಪ್ರಕರಣಗಳ ಸರಪಳಿಯನ್ನು ಮುರಿಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಎಬೊನಿ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕ ರಾಜೇಶ್ ರಾಜಾರಾಮ್ ಅವರು, ತಮ್ಮ ಬಾರ್ ಮತ್ತು ರೆಸ್ಟೋರೆಂಟ್ 13 ನೇ ಮಹಡಿಯಲ್ಲಿದೆ. ಗ್ರಾಹಕರು ಮಾತ್ರವಲ್ಲದೇ ನಮ್ಮ ಸಿಬ್ಬಂದಿಗಳೂ ಕೂಡ ಸೋಂಕಿಗೆ ತುತ್ತಾಗುವು ಭೀತಿ ಇದೆ. ನಗರದಲ್ಲಿ ಈಗಾಗಲೇ ಬೆಡ್ ಗಳ  ಅಭಾವ ವ್ಯಾಪಕವಾಗಿದ್ದು, ತಮ್ಮ ಸಿಬ್ಬಂದಿ ಸೋಂಕಿಗೆ ತುತ್ತಾಗಿ ಆಸ್ಪತ್ರೆಗಳಲ್ಲಿ ಸಂಕಷ್ಟ ಅನುಭವಿಸುವುದನ್ನು ತಾವು ಬಯಸುವುದಿಲ್ಲ. ಹೀಗಾಗಿ ತಮ್ಮ ರೆಸ್ಟೋರೆಂಟ್ ಬಂದ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT