ರಾಜ್ಯ

ರಾಜ್ಯಕ್ಕೆ 1,500 ಟನ್ ಆಮ್ಲಜನಕ, 1 ಲಕ್ಷ ರೆಮಿಡಿಸಿವರ್ ಅಗತ್ಯವಿದೆ: ಸಚಿವ ಸುಧಾಕರ್

Raghavendra Adiga

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು 1,500 ಮೆಟ್ರಿಕ್ ಟನ್ ಆಮ್ಲಜನಕ ಮತ್ತು ರೆಮಿಡಿಸಿವರ್ ನ ಒಂದು ಲಕ್ಷ ಬಾಟಲುಗಳನ್ನು ಪೂರೈಸಲು ಕರ್ನಾಟಕ ಕೇಂದ್ರವನ್ನು ಕೇಳಿದೆ. 

"ಮುಂದಿನ ಒಂದು ತಿಂಗಳಲ್ಲಿ ನಮಗೆ 1,500 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗಬಹುದು ಎಂದು ನಾವು ಅಂದಾಜು ಮಾಡಿದ್ದೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ" ಎಂದು ರಾಜ್ಯ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಗುರುವಾರ ತಿಳಿಸಿದರು.

ಅಲ್ಲದೆ ತಾನು ಸಹ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರಿಗೆ ಆಮ್ಲಜನಕ ಪೂರೈಕೆಗಾಗಿ ಪತ್ರ ಬರೆದಿರುವುದಾಗಿ ಸುಧಾಕರ್ ಹೇಳಿದ್ದಾರೆ. ರಾಜ್ಯದ ಪ್ರಮುಖ ಆಮ್ಲಜನಕ ಉತ್ಪಾದಕ ಸಂಸ್ಥೆಗಳೊಂದಿಗೆ ರಾಜ್ಯ ಸರ್ಕಾರ ಸಭೆ ನಡೆಸಿದೆ ಎಂದು ಸಚಿವರು ಹೇಳಿದ್ದು ಅವುಗಳಲ್ಲಿ ಜೆಎಸ್ಡಬ್ಲ್ಯೂ ಸ್ಟೀಲ್ ಮುಖ್ಯವಾದದ್ದೆಂದರು.

"ನಾವು ಸಜ್ಜನ್ ಜಿಂದಾಲ್ ಅವರೊಂದಿಗೆ ಸಭೆ ನಡೆಸಿದ್ದೇವೆ ಮತ್ತು ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪೂರೈಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ" ಎಂದು ಸುಧಾಕರ್ ಹೇಳಿದರು. ಸಭೆಯ ನಂತರ ಜೆಎಸ್‌ಡಬ್ಲ್ಯು ಸ್ಟೀಲ್ ಬೆಂಗಳೂರಿಗೆ ಕಳೆದ ಎರಡು ದಿನಗಳಲ್ಲಿ 40 ಮೆಟ್ರಿಕ್ ಟನ್ ಪೂರೈಸಿದೆ ಇದಲ್ಲದೆ ಕೋವಿಡ್ ಚಿಕಿತ್ಸೆಗೆ ನಿರ್ಣಾಯಕವಾದ ರೆಮಿಡಿಸಿವರ್ ಚುಚ್ಚುಮದ್ದನ್ನು ಹೆಚ್ಚುವರಿ ಸರಬರಾಜು ಮಾಡಲು ರಾಜ್ಯವು ಒತ್ತಾಯಿಸಿದೆ. ರಾಜ್ಯವು 70,000 ಬಾಟಲುಗಳ ರೆಮಿಡಿಸಿವರ್ ಚುಚ್ಚುಮದ್ದಿಗಾಗಿ ಬೇಡಿಕೆ ಇಟ್ಟಿದೆ, ಅದರಲ್ಲಿ 20,000 ಬಂದಿದ್ದು, ಉಳಿದವುಗಳನ್ನು ಮುಂದಿನ ದಿನಗಳಲ್ಲಿ ಪೂರೈಸಲಾಗುವುದು. "ನಾವು ಈಗಾಗಲೇ 70,000 ಬಾಟಲು ರೆಮಿಡಿಸಿವರ್ ಗಬೇಡಿಕೆ ಇರಿಸಿದ್ದೇವೆ.  ಇದಲ್ಲದೆ ನಾವು ಒಂದು ಲಕ್ಷ ರೆಮಿಡಿಸಿವರ್ ಬಾಟಲುಗಳ ಬೇಡಿಕೆಯನ್ನು ಮುಂದಿಟ್ಟಿದ್ದೇವೆ, ಇದಕ್ಕಾಗಿ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ" ಎಂದು ಅವರು ಹೇಳಿದರು. 

ರಾಜ್ಯವು ಮೊದಲೇ ಸಾಕಷ್ಟು ಆಮ್ಲಜನಕವನ್ನು ಏಕೆ ಸಂಗ್ರಹಿಸಲಿಲ್ಲ ಎಂಬ ಪ್ರಶ್ನೆಗೆ, ಪ್ರಕರಣಗಳು ಕಡಿಮೆಯಾದಾಗ, ಅಂತಹ ಬೇಡಿಕೆ ಇರಲಿಲ್ಲಆದ್ದರಿಂದ ಅದನ್ನು ಸಂಗ್ರಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾವಿಸಲಾಗಿತ್ತು ಎಂದು ಸಚಿವರು ಹೇಳಿದರು.

SCROLL FOR NEXT