ರಾಜ್ಯ

ಆಸ್ಪತ್ರೆ, ಪಿಹೆಚ್ ಸಿ ಗಳಲ್ಲಿ ಕೋವಿಡ್-19 ಲಸಿಕೆ ದಾಸ್ತಾನು ಕೊರತೆ

Srinivas Rao BV

ಬೆಂಗಳೂರು: ಕೋವಿಡ್-19 ಪ್ರಕರಣಗಳ ಏರಿಕೆ ಒಂದೆಡೆಯಾದರೆ, ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಮುಂದಾಗುತ್ತಿರುವುದು ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆ ದಾಸ್ತಾನನಿಗೆ ಕೊರತೆ ಉಂಟು ಮಾಡಿದೆ. 

ವಿವೇಕ್ ನಗರದ ಸೇಂಟ್ ಫಿಲೋಮಿನಾಸ್ ಆಸ್ಪತ್ರೆ, ಹೆಚ್ಎಎಲ್ II ನೇ ಹಂತದಲ್ಲಿರುವ ಆಕ್ಸಾನ್ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆ ಅಲಭ್ಯತೆ ಕುರಿತಾಗಿ ಭಾನುವಾರದಂದು ಫಲಕ ಹಾಕಲಾಗಿತ್ತು. 

ಭಾನುವಾರದಂದು ಲಸಿಕೆ ಪಡೆಯುವವರ ಪೈಕಿ ಪ್ರಮುಖವಾಗಿ ಎರಡನೇ ಡೋಸ್ ಪಡೆಯಬೇಕಿದ್ದ ಹಿರಿಯ ನಾಗರಿಕರಿಗೆ ಇದರಿಂದ ಅನಾನುಕೂಲ ಉಂಟಾಗಿದ್ದು, ಸೇಂಟ್ ಮಾರ್ಥಾಸ್ ಆಸ್ಪತ್ರೆ, ಅಭಯ ಹಸ್ತ ಆಸ್ಪತ್ರೆ ಹಾಗೂ ಬ್ರಿಮ್‌ಕೇರ್ ಆಸ್ಪತ್ರೆಯಿಂದ ವಾಪಸ್ಸಾಗಬೇಕಾಯಿತು. 

ಶುಕ್ರವಾರ, ಶನಿವಾರಗಳಂದು ಪರಿಸ್ಥಿತಿ ಇದೇ ರೀತಿಯಲ್ಲಿತ್ತು ಎಂದು ಹೆಚ್ಎಸ್ಆರ್ ಲೇಔಟ್ ನ ನಿವಾಸಿ ದಿವಾಕರ್ ಪಿಡಿ ತಿಳಿಸಿದ್ದಾರೆ. 

"ಮೊದಲ ಡೋಸ್ ಪಡೆಯಬೇಕಾದರೆ ಜನರು ಕರೆ ಮಾಡಿ ಸಮಯ ನಿಗದಿಪಡಿಸಿಕೊಳ್ಳಬಹುದಾಗಿತ್ತು. ಆದರೆ ಎರಡನೇ ಡೋಸ್ ಗೆ ನೇರವಾಗಿ ಲಸಿಕೆ ನೀಡುವ ಕೇಂದ್ರಗಳಿಗೆ ತೆರಳಿ ಕಾಯಬೇಕಾಗುತ್ತದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ತೆರಳಿ ಗಂಟೆಗಟ್ಟಲೆ ಕಾಯುವುದು ಹಿರಿಯ ನಾಗರಿಕರಿಗೆ ಕಷ್ಟದ ಕೆಲಸ" ಎಂದು ದಿವಾಕರ್ ಬೇಸರ ವ್ಯಕ್ತಪಡಿಸಿದ್ದಾರೆ. 

ಮಂಗಳೂರಿನಲ್ಲಿ ಕೋವ್ಯಾಕ್ಸಿನ್ ಕೊರತೆ 

ಬೆಂಗಳೂರಿನಲ್ಲಿ ನಮ್ಮ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಪಡೆಯುವುದಕ್ಕೆ ಯತ್ನಿಸುತ್ತಿದ್ದೇವೆ. ಆದರೆ ಆಸ್ಪತ್ರೆಗಳು ಕನಿಷ್ಟ ಸಂಖ್ಯೆಗಳನ್ನು ಕೇಳುತ್ತಾರೆ.  ಮೇ.1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ನೀತಿ ಜಾರಿಗೆ ಬರಲಿದೆ. ಆಗ ತೆಗೆದುಕೊಳ್ಳುತ್ತದೆ ಎಂದು ಬೆಂಗಳೂರಿನ ನಾಗರಿಕರು ಹೇಳಿದ್ದಾರೆ. ಮಂಗಳೂರಿನಲ್ಲೂ ಕೋವ್ಯಾಕ್ಸಿನ್ ಕೊರತೆ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

SCROLL FOR NEXT