ಸಂಗ್ರಹ ಚಿತ್ರ 
ರಾಜ್ಯ

ಡಿಜೆ ಹಳ್ಳಿ ಗಲಭೆ: 18 ಆರೋಪಿಗಳಿಗೆ ಎನ್ಐಎ ಕೋರ್ಟ್ ಜಾಮೀನು ನಿರಾಕರಣೆ

ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಕೋರ್ಟ್ 18 ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.

ಬೆಂಗಳೂರು: ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಕೋರ್ಟ್ 18 ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.

ಕಾನೂನು ಬಾಹಿರ ಚಟುವಟಿಕೆ ಕಾಯಿದೆ ಅನ್ವಯ ವಿಶೇಷ ಕೋರ್ಟ್ ನ್ಯಾಯಾಧೀಶ ಕಸನಪ್ಪ ನಾಯಕ್ ಜಾಮೀನು ನಿರಾಕರಿಸಿದ್ದಾರೆ. ಸೈಯ್ಯದ್ ಖಾಲಿದ್, ಮುದಾಸಿರ್ ಅಹ್ಮದ್, ಸೈಯ್ಯದ್ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್, ಮೊಹಮದ್ ತೌಸೀಫ್, ಶಹಬಾಜ್, ಆರೀಫ್ ಫಾಷಾ, ಫಾರೂಕ್, ಶಾಮೀಲ್ ಪಾಷಾ ಮತ್ತು ತನ್ವೀರ್ ಖಾನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. 

ಅರ್ಜಿದಾರರ ಪರ ವಾದ ಮಾಡಿದ ವಕೀಲರು, ತಮ್ಮ ಕಕ್ಷಿದಾರರು ಯಾವುದೇ ಉಗ್ರ ಸಂಘಟನೆಗೆ ಸೇರಿದವರಲ್ಲ, ಪೋಲೀಸರು ಸರಿಯಾದ ತನಿಖೆ ನಡೆಸದೇ ಅವರ ವಿರುದ್ಧ ಪಿಟಿಷನ್ ಸಲ್ಲಿಸಿದ್ದಾರೆ ಎಂದು ವಾದಿಸಿದ್ದರು.

ವಾದ ಆಲಿಸಿದ ನ್ಯಾಯಾಲಯ, ಇದು ಸರಳ ಗಲಭೆ ಪ್ರಕರಣವಲ್ಲ, ಆರೋಪಿಗಳಿಂದ ಬಹುದೊಡ್ಡ ಪಿತೂರಿ ನಡೆದಿದೆ ಎಂದು ಕೋರ್ಟ್ ತಿಳಿಸಿತ್ತು.

ಆರೋಪಿಗಳು ಡಿಸಿಪಿಯ ವಾಹನವನ್ನು ಉರುಳಿಸುವ ಮಟ್ಟಿಗೆ ಹೋಗಿದ್ದಾರೆ ಮತ್ತು ಪೊಲೀಸ್ ಸಿಬ್ಬಂದಿ ಮತ್ತು ಖಾಸಗಿ ವ್ಯಕ್ತಿಗಳ ಹಲವಾರು ಮೋಟರ್ ಸೈಕಲ್‌ಗಳನ್ನು ಸುಟ್ಟುಹಾಕಿದ್ದಾರೆ. ಈ ಮತ್ತು ಇತರ ಆರೋಪಿಗಳು ಪೊಲೀಸ್ ಠಾಣೆಗೆ ವ್ಯಾಪಕ ಹಾನಿ ಮಾಡಿದ್ದಾರೆ ಎಂದು ಹೇಳಿದೆ.

ಸೈಯದ್ ಇಕ್ರಾಮುದ್ದೀನ್ ಅಲಿಯಾಸ್ ಸೈಯದ್ ನವೀದ್, ಶೇಖ್ ಮುಹಮ್ಮದ್ ಬಿಲಾಲ್, ಸೈಯದ್ ಆಸಿಫ್, ಮೊಹಮ್ಮದ್ ಅತೀಫ್, ಮೊಹಮ್ಮದ್ ಮುದಾಸೀರ್ ಕಲೀಮ್, ನಕೀಬ್ ಪಾಷಾ, ಇಮ್ರಾನ್ ಅಹ್ಮದ್, ಮೊಹಮ್ಮದ್ ಅಜರ್, ಮತ್ತು ಕರೀಮ್ ಅಲಿಯಾಸ್ ಸದ್ದಾಂ ಅವರು ಜಾಮೀನಿಗಾಗಿ ಸಲ್ಲಿಸಿದ್ದಾರೆ, ಆದರೆ ನ್ಯಾಯಾಲಯವು ಅರ್ಜಿದಾರರ ವಿರುದ್ಧದ ಆರೋಪಗಳನ್ನು ಹೇಳಿದೆ ಗಂಭೀರ ಮತ್ತು ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್