ಬೆಂಗಳೂರು: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಲಸಿಕೆ ನೀಡುವ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.
ಜನರನ್ನು ನಿಯಂತ್ರಿಸುವುದು ಖಾಸಗಿ ಮತ್ತು ಸರ್ಕಾರಿ ಲಸಿಕಾ ಕೇಂದ್ರಗಳ ವೈದ್ಯರಿಗೆ ಮತ್ತು ನಿರ್ವಹಣಾಕಾರರಿಗೆ ಸವಾಲಿನ ಕೆಲಸವಾಗಿದೆ.
ಸರ್ಕಾರ 14 ದಿನಗಳ ಲಾಕ್ ಡೌನ್ ಘೋಷಿಸಿ, ಕಠಿಣ ನಿಯಮ ಜಾರಿಗೆ ತರುತ್ತದೆ ಎಂದು ತಿಳಿದ ಮೇಲೆ ಮಧ್ಯಾಹ್ನದ ನಂತರ ಜನ ಸಂಖ್ಯೆ ಹೆಚ್ಚಿತ್ತು, ಸಾಮಾಜಿಕ ಅಂತರ ಮರೆತ ಜನ ಲಸಿಕೆ ಪಡೆದುಕೊಳ್ಳಲು ಮುಗಿಬಿದ್ದಿದ್ದರು.
ಲಸಿಕೆ ಪಡೆದುಕೊಂಡ ನಂತರ ಅಡ್ಡ ಪರಿಣಾಮಗಳ ಹಿಸಲು 30 ನಿಮಿಷಗಳ ಲಸಿಕಾ ಕೇಂದ್ರದಲ್ಲೇ ಕಾಯಬೇಕಾಗಿತ್ತು. ಆದರೆ ಜನ ಯಾವುದೇ ನಿಯಮ ಪಾಲಿಸಲಿಲ್ಲ,
ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ, ರೋಗಿಗಳನ್ನು ಪರೀಕ್ಷಿಸಲು ವೀಕ್ಷಕರು ಅಥವಾ ವೈದ್ಯರು ಇರಲಿಲ್ಲ, ಇನ್ನೂ ಕೆಲವು ಕಡೆ ಸರತಿ ಸಾಲುಗಳು ಉದ್ದವಾಗಿದ್ದರಿಂದ ಫಲಾನುಭವಿಗಳಿಗೆ ಕಾಯಲು ಸ್ಥಳವೇ ಇರಲಿಲ್ಲ,
ಸಿಬ್ಬಂದಿ ಕಡಿಮೆ ಇದ್ದಾರೆ, ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ, ಹೀಗಾಗಿ ನಾವು ಅಸಹಾಯಕರಾಗಿದ್ದೇವೆ, ಆಬ್ಸರ್ ವೇಷನ್ ರೂಂ ನಲ್ಲಿ ಕಾಯಲು ಜನರಿಗೆ ಇಚ್ಚೆಯಿಲ್ಲ, ಯಾರಿಗಾದರು ಸೈಡ್ ಎಫೆಕ್ಟ್ ಉಂಟಾಯಿತೆ ಎಂಬುದು ತಿಳಿದಿಲ್ಲ,
ರೋಗಿಗಳಿಗೆ ಯಾವುದೇ ಅಡ್ಡ ಪರಿಣಾಮಗಳಿದ್ದರೆ ನಾವು ಪ್ಯಾರಾಸಿಟಮಲ್ ಮಾತ್ರೆ ತೆಗೆದುಕೊಳ್ಳುವಂತೆ ಹೇಳುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಲಸಿಕೆ ತೆಗೆದುಕೊಳ್ಳಲು ಜನ ಮುಂದೆ ಬರುತ್ತಿರುವುದು ಉತ್ತಮವಾಗಿದೆ, ಕರ್ಫ್ಯೂ ಸಂದರ್ಭದಲ್ಲಿ ಲಸಿಕೆ ನೀಡುವುದನ್ನು ನಿಲ್ಲಿಸಲಾಗುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.