ರಾಜ್ಯ

ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರು ನಾಪತ್ತೆ: ಸಚಿವ ಆರ್.ಅಶೋಕ್

Raghavendra Adiga

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಕರ್ನಾಟಕ ಕಂದಾಯ ಸಚಿವ ಆರ್ ಆರ್.ಅಶೋಕ್, ಹೆಚ್ಚಿನ ಸೋಂಕಿತ ಜನರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಬೆಂಗಳೂರಿನಿಂದ 'ಕಾಣೆಯಾಗಿರುವ' ಸುಮಾರು 3 ಸಾವಿರ ಜನರು ಈ ರೋಗವನ್ನು ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.  ಇನ್ನು ಹೀಗೆ  'ಕಾಣೆಯಾಗಿರುವವರಿಗಾಗಿ’ ಪೋಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

"ನಾವು ಜನರಿಗೆ ಉಚಿತ ಔಷಧಿಗಳನ್ನು ನೀಡುತ್ತಿದ್ದೇವೆ, ಇದು ಶೇಕಡಾ 90 ರಷ್ಟು ಪ್ರಕರಣಗಳನ್ನು ನಿಯಂತ್ರಿಸಬಲ್ಲದು, ಆದರೆ ಅವರು (ಕೋವಿಡ್ ಸೋಂಕಿತ ಜನರು) ತಮ್ಮ ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ. ಅವರು ಐಸಿಯು ಹಾಸಿಗೆಗಳಿಗಾಗಿ ಹುಡುಕುವ ಹಂತದಲ್ಲಿ ಆಸ್ಪತ್ರೆಯನ್ನು ತಲುಪುತ್ತಾರೆ. ಆಗ ಪರಿಸ್ಥಿತಿ ಬಿಗಡಾಯಿಸಲಿದೆ" ಎಂದು ಆರ್.ಅಶೋಕ್ ಹೇಳಿದರು.

ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಜನರು ತಮ್ಮ ಇರುವಿಕೆಯ ಬಗ್ಗೆ ಇತರರಿಗೆ ತಿಳಿಸುತ್ತಿಲ್ಲ. ಇದು ಪರಿಸ್ಥಿತಿಯನ್ನು ಕಷ್ಟಕರವಾಗಿಸುತ್ತಿದೆ ಎಂದು ಅವರು ಹೇಳಿದರು. "ಬೆಂಗಳೂರಿನಲ್ಲಿ ಕನಿಷ್ಠ 2,000 ದಿಂದ 3,000 ಜನರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ನಾನು ಊಹಿಸಿದ್ದೇನೆ. ಅವರು ಎಲ್ಲಿಗೆ ಹೋಗಿದ್ದಾರೆಂದು ನಮಗೆ ತಿಳಿದಿಲ್ಲ" ಎಂದು ಸಚಿವರು ಹೇಳಿದರು.

ಸೋಂಕಿತರಿಗೆ ತಮ್ಮ ಫೋನ್‌ಗಳನ್ನು ಸ್ವಿಚ್ ಆನ್ ಮಾಡುವಂತೆ ಮನವಿ ಮಾಡಿದ ಸಚಿವರು ಅವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಲಾಗಿದೆ. "ಈ (ನಡವಳಿಕೆಯಿಂದ) ಮಾತ್ರ ಕೋವಿಡ್ ಪ್ರಕರಣಗಳು ಹೆಚ್ಚಾಗಲಿದೆ. ನಾನು ಕೈಮುಗಿದು ಪ್ರಾರ್ಥಿಸುತ್ತೇನೆ. ನೀವು ಕೊನೆಯ ಕ್ಷಣದಲ್ಲಿ ಐಸಿಯು ಹಾಸಿಗೆ ಅಗತ್ಯವಿದ್ದಾಗ ಆಸ್ಪತ್ರೆಗೆ ಆಗಮಿಸಿದರೆ ಅದು ತಪ್ಪು ನಡವಳಿಕೆ" ಎಂದರು. 

SCROLL FOR NEXT