ರಾಜ್ಯ

ಬಿಮ್ಸ್ ಮುಖ್ಯಸ್ಥರನ್ನು ಬಂಧಿಸಿ, ಸಭೆಗೆ ಕರೆತನ್ನಿ: ಡಿಸಿಎಂ ಲಕ್ಷ್ಮಣ ಸವದಿ ಆದೇಶ

Shilpa D

ಬೆಳಗಾವಿ: ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಕರೆದಿದ್ದ ಸಭೆಗೆ ಬಿಮ್ಸ್ ನಿರ್ದೇಶಕ ಡಾ. ವಿನಯ್ ದಸ್ತಿಕೊಪ್ಪ ಗೈರಾಗಿದ್ದರು. ಇದರಿಂದ ಕೋಪಗೊಂಡ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಂಧಿಸಿ ಸಭೆಗೆ ಕರೆ ತರುವಂತೆ ಪೊಲೀಸ್ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ಅವರಿಗೆ ಆದೇಶಿಸಿದರು.

ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಕ್ಸಿಜನ್, ಮೆಡಿಸನ್, ಲಸಿಕೆ ಬಗ್ಗೆ ಚರ್ಚಿಸಲು ಬುಧವಾರ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲಾ ಪಂಚಾಯಿತಿ ಹಾಲ್ ನಲ್ಲಿ ಸಭೆ ಕರೆದಿದ್ದರು,

ಆದರೆ ಈ ಬಗ್ಗೆ ವಿವರಗಳನ್ನು ನೀಡಬೇಕಿದ್ದ ಡಾ. ದಸ್ತಿಕೊಪ್ಪ ಸಭೆಗೆ ಹಾಜರಾಗಲಿಲ್ಲ, ಇದರಿಂದ ಸವದಿ ಕೋಪಗೊಂಡಿದ್ದರು, ಅವರು ಮೊದಲು ವೈದ್ಯ ನಂತರ, ಬಿಮ್ಸ್ ನಿರ್ದೇಶಕ, ಅವರನ್ನು ಬಂಧಿಸಿ ಸಭೆಗೆ ಕರೆ ತನ್ನಿ ಎಂದು ಎಸ್ ಪಿ ನಿಂಬರ್ಗಿ ಅವರಿಗೆ ಸೂಚಿಸಿದರು.

ಈ ಸಂಬಂಧ ದಸ್ತಿಕೊಪ್ಪ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಲಾಯಿತು, ವಿಷಯ ತಿಳಿದ ಕೂಡಲೇ ದಸ್ತಿಕೊಪ್ಪ ಸಭೆಗೆ ಹಾಜರಾದರು. ಅವರನ್ನು ನೋಡಿದ, ಸವದಿ ನಿಮಗೆ ದೊಡ್ಡ ನಮಸ್ಕಾರ, ಜನರು ಸಮಸ್ಯೆಯಿಂದ ಸಾಯುತ್ತಿರುವಾಗ ನೀವು ಸಭೆಗೆ ಗೈರಾಗುತ್ತೀರಿ, ನಿಮ್ಮಂತವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ಹೇಳಿದರು.

ಬಿಮ್ಸ್ ನಲ್ಲಿ ಲಭ್ಯವಿರುವ ಹಾಸಿಗೆ ಮತ್ತು ಐಸಿಯು ಬೆಡ್ ಗಳ ಬಗ್ಗೆ ವಿವರಣೆ ಪಡೆದರು, ಬೆಡ್ ಗಳು ಇದ್ದರು ಜನ ಏಕೆ ಆಸ್ಪತ್ರೆಗೆ ಬರುತ್ತಿಲ್ಲ ಎಂದು ದಸ್ತಿಕೊಪ್ಪ ಅವರನ್ನು ಪ್ರಶ್ನಿಸಿದರು.

ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡುತ್ತಿದ್ದರೂ ಬಿಮ್ಸ್ ಅಧಿಕಾರಿಗಳು ಅವನ್ನು ಜನರಿಗೆ ಸರಿಯಾಗಿ ತಲುಪಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜನ ಬಿಮ್ಸ್ ಆಸ್ಪತ್ರೆಯನ್ನು ಅನುಮಾನವಾಗಿ ನೋಡುತ್ತಿದ್ದಾರೆ, ಪರಿಸ್ಥಿತಿ ಸುಧಾರಿರಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

SCROLL FOR NEXT