ರಾಜ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ

Manjula VN

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಸರಬರಾಜಿನಲ್ಲಿ ವ್ಯತ್ಯಯ ಕಂಡು ಬಂದಿರುವುದರಿಂದ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಎಲ್ಲಾ ಫಲಾನುಭವಿಗಳಿಗೆ ಲಸಿಕೆ ನೀಡಲು ಏಕಕಾಲದಲ್ಲಿ ಸಾಧ್ಯವಾಗದೆ ಇರುವುದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆಯನ್ನು ನೀಡಲಾಗುವುದು.

ಈಗಾಗಲೇ ಮೊದಲನೇ ಡೋಸ್ ಲಸಿಕೆಯನ್ನು ಪಡೆದ ಫಲಾನುಭವಿಗಳಿU ಮಾತ್ರ 2 ನೇ ಡೋಸ್ ಅನ್ನು ನೀಡಲಾಗುವುದು, ಕಡ್ಡಾಯವಾಗಿ ಆನ್ ಲೈನ್ ನೋಂದಣಿ ಮಾಡಿಕೊಂಡ ಫಲಾನುಭವಿಗಳಗೆ (60 ವರ್ಷ ಮೇಲ್ಪಟ್ಟ ಮತ್ತು 45 ವರ್ಷ ಮೇಲ್ಪಟ್ಟ) ಲಸಿಕಾ ಲಭ್ಯತೆಯನ್ನು ನೋಡಿಕೊಂಡು ಲಸಿಕೆಯನ್ನು ಪಡೆಯಲು ಮುಂದಿನ ದಿನಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗುವುದು.

ಆನ್ ಸ್ಪಾಟ್ ನೋಂದಣಿಗೆ ಅವಕಾಶವಿರುವುದಿಲ್ಲ. ಲಸಿಕಾ ಶಿಬಿರವನ್ನು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಹೊರತು ಪಡಿಸಿ ಸಂಘ ಸಂಸ್ಥೆಗಳ ಮುಖಾಂತರ ಶಿಬಿರಗಳನ್ನು ಹೊರವಲಯದಲ್ಲಿ ನಡೆಸಲು ಅವಕಾಶವಿರುವುದಿಲ್ಲ. 18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಲಸಿಕೆಯನ್ನು ಪಡೆದುಕೊಳ್ಳಲು ಆನ್ಲೈನ್ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಶಿಬಿರವನ್ನು ಲಸಿಕಾ ಲಭ್ಯತೆಯನ್ನು ನೋಡಿಕೊಂಡು 2021 ಮೇ 10 ರ ನಂತರ ಆಯೋಜಿಸಲಾಗುವುದು.

SCROLL FOR NEXT