ರಾಜ್ಯ

ಡ್ರೋಣ್ ಮೂಲಕ ಸ್ಯಾನಿಟೈಸೇಷನ್ ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

Nagaraja AB

ಬೆಂಗಳೂರು: ನೂತನವಾಗಿ ಆವಿಷ್ಕಾರವಾಗಿರುವ ಡ್ರೋಣ್ ಮೂಲಕ ಸ್ಯಾನಿಟೈಸೇಷನ್ ಮಾಡುವ ಯಂತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಉದ್ಘಾಟಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಇಡೀ ದೇಶ ಕೊರೋನಾ ಸಂಕಷ್ಟವನ್ನುಎದುರಿಸುತ್ತಿದೆ.ಈಸಂದರ್ಭದಲ್ಲಿ ತಂತ್ರಜ್ಞಾನ ಮೂಲಕ ತುರ್ತಾಗಿ ಕೋವಿಡ್ ಔಷಧಿ ತಲುಪಿಸಲು ಡ್ರೋಣ್ ಗಳು ಕಾರ್ಯಾಚರಣೆಗೆ ಇಳಿದಿವೆ.ಸುಮಾರು 45 ಕೆಜಿ ಸಾಮಾಗ್ರಿ ತುಂಬಿ  ಹಾರುವ ಡ್ರೋಣ್ ಗಳು ನಮ್ಮ ರಾಜ್ಯದಲ್ಲೂ ಸೇವೆ ನೀಡುತ್ತಿವೆ. ಗರುಡ ಸಂಸ್ಥೆಯವರು ಈ ಸೇವೆ ಉಚಿತವಾಗಿ ಡ್ರೋಣ್ ಸೇವೆ ನೀಡುತ್ತಿದ್ದಾರೆ. ಸ್ಯಾನಿಟೈಸಿಂಗ್ ಅನ್ನೂ ಡ್ರೋಣ್ ಮೂಲಕ ಮಾಡಬಹುದು ಎಂದರು.

ಮೇ.1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಇನ್ನೂ ಆರಂಭವಾಗದ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಲಸಿಕೆಗಳು ನಮಗೆ ಪೂರೈಕೆ ಆಗಿಲ್ಲ.ಲಸಿಕೆಗಳು ಪೂರೈಕೆ ಆದ ಕೂಡಲೇ ಲಸಿಕೆ ಹಾಕುತ್ತೇವೆ.ಲಸಿಕೆಗಳು ಪೂರೈಕೆ ವಿಳಂಬ ಆಗುತ್ತಿದೆ. ಸಿಗುತ್ತೆ ಅಂದುಕೊಂಡಿದ್ದೆವು,ಆದರೆ ಲಸಿಕೆ ಸಿಗುವುದು ವಿಳಂಬವಾಗಿದೆ.ಇದರಲ್ಲಿ ವೈಫಲ್ಯದ ಪ್ರಶ್ನೆ ಬರುವುದಿಲ್ಲ.ಪ್ರಧಾನಿಯವರನ್ನು ಇದರಲ್ಲಿ ಮಧ್ಯೆ ತರಬೇಡಿ. ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗುವ ಭರವಸೆ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಕಿಡಿಕಾರಿದರು.

SCROLL FOR NEXT