ರಾಜ್ಯ

ಮಳೆಗಾಲ: ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಕೆಎಸ್‌ಆರ್‌ಟಿಸಿ

Manjula VN

ಬೆಂಗಳೂರು: ಮಳೆಗಾಲ ಆರಂಭವಾಗಿದ್ದು, ಪ್ರವಾಸ ಮಾಡಲು ಇಷ್ಟಪಡವವರಿಗಂತೂ ಇದೊಂದು ಅತ್ಯುತ್ತಮ ಕಾಲವಾಗಿದೆ. ಅನ್‌ಲಾಕ್ ಘೋಷಣೆಯಾದ ಬಳಿಕವಂತೂ ಸಂಚಾರ ನಡೆಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಜನರು ಹೆಚ್ಚಾಗಿ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಹಲವಾರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಯ ಬೆಂಗಳೂರು ಕೇಂದ್ರೀಯ ವಿಭಾಗವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರವಾಸ ಪ್ಯಾಕೇಜ್‌'ಗಳನ್ನು ಘೋಷಿಸಿದೆ. 

ಕೆಲ ದಿನಗಳ ಹಿಂದೆ ಕೆಎಸ್ಆರ್‌ಟಿಸಿ ತಿರುಪತಿಗೆ ಹೋಗುವ ಭಕ್ತರಿಗಾಗಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿತ್ತು. 

ಪ್ಯಾಕೇಜ್ ಗಳು ಇಂತಿವೆ...
ದಾವಣಗೆರೆ-ಹರಿಹರ-ಶಿರಸಿ ಮೂಕಾಂಬಿಕ ದೇವಸ್ಥಾನ-ಜೋಗ್ ಜಲಪಾತ, ಚಳ್ಳಕೆರೆ-ಚಿತ್ರದುರ್ಗ-ವರದಮೂಲ-ಇಕ್ಕೇರಿ-ಜೋಗ್ ಜಲಪಾತ, ಬೆಂಗಳೂರು- ಚುಂಚಿ ಜಲಪಾತ-ಶಿವನಮಕರೇಶ್ವರ ದೇವಸ್ಥಾನ-ಮಡಿವಾಳ-ಸಂಗಮ-ಮುತ್ತತ್ತಿ-ಗಗನಚುಕ್ಕಿ, ಬೆಂಗಳೂರು-ಸೋಮನಾಥಪುರ ದೇವಸ್ಥಾನ-ತಲಕಾಡು-ಬರಚುಕ್ಕಿ-ಗಗನಚುಕ್ಕಿ, ಬೆಂಗಳೂರು- ಚಿತ್ರದುರ್ಗ ಕೋಟೆ-ಚಂದವಳ್ಳಿ-ವಾಣಿವಿಲಾಸ ಸಾಗರ, ದಾವಣಗೆರೆ-ಚಿತ್ರದುರ್ಗ ಕೋಟೆ-ಮುರುಗಮಠ- ಚಂದವಳ್ಳಿ ಉದ್ಯಾನ-ವಾಣಿವಿಲಾಸ ಸಾಗರ ಮತ್ತು ದಾವಣಗೆರೆ-ಹರಿಹರ-ಹಂಪಿ.

ಮುಂಗಡ ಆಸನಗಳನ್ನು ಕಾಯ್ದಿರಿಸಲು ವೆಬ್‍ಸೈಟ್ ವಿಳಾಸ: ksrtc.karnataka.gov.in/www.ksrtc.in ಮತ್ತು ನಿಗಮದ ಫ್ರಾಂಚೈಸಿ ಕೌಂಟರ್‍ಗಳ ಮೂಲಕವೂ ಪ್ರಯಾಣಿಕರು ಪ್ಯಾಕೇಜ್ ಪ್ರವಾಸದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಎಲ್ಲಾ ಪ್ರಯಾಣಿಕರೂ ಪ್ರಯಾಣದ ವೇಳೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.

SCROLL FOR NEXT