ರಾಜ್ಯ

ಲಾಕ್‌ಡೌನ್ ಅವಧಿಯ ತೆರಿಗೆ ಪಾವತಿ: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

Srinivasamurthy VN

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಲಾಕ್ಡೌನ್ ಅವಧಿಯಲ್ಲಿ ಪಾಲಿಕೆಯ ಜಾಗ ಮತ್ತು ಕಟ್ಟಡಗಳಿಗೆ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.

ಬಿಬಿಎಂಪಿ ತೆರಿಗೆ ವಿಧಿಸಿದ್ದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಸೋಮವಾರ ನೋಟಿಸ್ ನೀಡಿದೆ.

ನಗರದಲ್ಲಿ ಶಾಪಿಂಗ್ ಮಾಲ್ ಹೊಂದಿರುವ ಜಿ.ಟಿ. ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಅರ್ಜಿ ಸಲ್ಲಿಸಿದ್ದು, ಪಾಲಿಕೆಯ ಆಸ್ತಿ ಉಪಯೋಗಿಸಲು ಲಾಕ್ಡೌನ್ ಅವಧಿಯಲ್ಲಿ ನಿರ್ಬಂಧ ಇತ್ತು. ಆ ಅವಧಿಯ ತೆರಿಗೆ ಪಾವತಿಸುವುದು ಹೇಗೆ’ ಎಂದು ಅರ್ಜಿಯಲ್ಲಿ ಪ್ರಶ್ನಿಸಿತ್ತು. 

ಅರ್ಜಿಯಲ್ಲಿರುವಂತೆ 2019–20, 2020–21 ಮತ್ತು 2021–22 ಹಣಕಾಸು ವರ್ಷಗಳಲ್ಲಿ ಲಾಕ್ಡೌನ್ ಕಾರಣಕ್ಕೆ ಹಲವು ದಿನ ಮುಚ್ಚಲಾಗಿತ್ತು. ಆದರೂ ಬಿಬಿಎಂಪಿಯಿಂದ ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಆಸ್ತಿ ತೆರಿಗೆ ಪಾವತಿಗೆ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ಮಧ್ಯಂತರ ಆದೇಶ ಹೊರಡಿಸುವಂತೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದರು. 

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ. 'ಬಿಬಿಎಂಪಿ ಕ್ರಮಕ್ಕೆ ಮುಂದಾದರೆ ಕಾನೂನಿನ ಅಡಿಯಲ್ಲಿ ಮುಂದುವರಿಯಲು ಅರ್ಜಿದಾರರು ಸ್ವತಂತ್ರರು ಎಂದು ತಿಳಿಸಿದೆ.
 

SCROLL FOR NEXT