ರಾಜ್ಯ

ಕಲಬುರಗಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಹುತಾತ್ಮ ಬಿಎಸ್ಎಫ್ ಯೋಧನ ಅಂತ್ಯಕ್ರಿಯೆ

Srinivas Rao BV

ಕಲಬುರಗಿ: ತ್ರಿಪುರಾದ ಧಲಾಯ್ ನಲ್ಲಿ ಉಗ್ರರೊಂದಿಗೆ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದ ಕರ್ನಾಟಕದ ಬಿಎಸ್ಎಫ್ ಯೋಧ ರಾಜ್ ಕುಮಾರ್ ಎಂ.ಮವಿನ್ ಅವರ ಅಂತ್ಯಕ್ರಿಯೆ ಕಲಬುರಗಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. 

ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಆ.07 ರಂದು ರಾತ್ರಿ ರಾಜ್ ಕುಮಾರ್ ಮಾವಿನ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್ ನ ವಿಮಾನ ನಿಲ್ದಾಣದ ಮೂಲಕ ಚಿಂಚನಸೂರು ಗ್ರಾಮಕ್ಕೆ ತರಲಾಗಿತ್ತು.

ಆ.08 ರ ಮಧ್ಯಾಹ್ನದ ವರೆಗೂ ಪಾರ್ಥಿವಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕಲಬುರಗಿ-ಗ್ರಾಮೀಣ ಭಾಗದ ಶಾಸಕ ಬಸವರಾಜ ಮತ್ತಿಮಡು ಹುತಾತ್ಮ ಯೋಧನಿಗೆ ಗೌರವ ನಮನ ಸಲ್ಲಿಸಿ, ರಾಜ್ ಕುಮಾರ್ ಮಾವಿನ್ ಅವರ ಪುತ್ಥಳಿ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಹುತಾತ್ಮ ಯೋಧನಿಗೆ ಸರ್ಕಾರಿ ಗೌರವ ಸಲ್ಲಿಸುವುದಕ್ಕಾಗಿ ಪೊಲೀಸರು 3 ಸುತ್ತಿನ ಗುಂಡು ಹಾರಿಸಿದರು. ಡಿಸಿ ವಿ.ವಿ ಜ್ಯೋತ್ಸ್ನಾ, ಎಸ್ ಪಿ ಸಿಮಿ ಮರಿಯನ್ ಜಾರ್ಜ್, ಬಿಎಸ್ಎಫ್ ನ ಹಿರಿಯ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಬೌದ್ಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. 

ಆರ್ ಸಿ ನಾಥ್ ಬಾರ್ಡರ್ ಔಟ್ ಪೋಸ್ಟ್ ಬಳಿ ಗಸ್ತು ತಿರುಗುತ್ತಿರಬೇಕಾದರೆ, ತ್ರಿಪುರಾದ ನ್ಯಾಷನಲ್ ಲಿಬರೇಷನ್ ಫ್ರಂಟ್ ನ ಭಯೋತ್ಪಾದಕರೊಂದಿಗಿನ ಗುಂಡಿನ ಕಾಳಗದಲ್ಲಿ ರಾಜ್ ಕುಮಾರ್ ಹಾಗೂ ಬಿಎಸ್ಎಫ್ ನ ಸಬ್ ಇನ್ಸ್ಪೆಕ್ಟರ್ ಭುರು ಸಿಂಗ್ ಹುತಾತ್ಮರಾಗಿದ್ದರು. 

SCROLL FOR NEXT