ರಾಜ್ಯ

ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿಲ್ಲಿಸಬೇಕು; ಅದರಿಂದಲೂ ಕೋವಿಡ್ ಹರಡಬಹುದು: ತಜ್ಞರು

Manjula VN

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ. ಇದು ಕೇವಲ ಸಾಮಾಜಿಕ ವಿರೋಧಿ ಮಾತ್ರವಲ್ಲ ಅನಾರೋಗ್ಯಕರ ಕೂಡ. ಅಜಾಗರೂಕತೆಯಿಂದ ಉಗುಳುವುದರಿಂದ.ಕೊರೋನಾ, ಕ್ಷಯ ಮತ್ತು ಇತರೆ ಸೋಂಕುಗಳು ಹರಡಲು ಕಾರಣವಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ. 

ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಯುಟಿಫುಲ್ ಬೆಂಗಳೂರು ಹಾಗೂ ಸಾರಾ ಜಹಾನ್ ಸೆ ಅಚ್ಚಾ ಫುಣೆ ತಂಡಗಳು "ಉಗುಳುವ ನಿಷೇಧದ ಅಭಿಯಾನ"ವನ್ನು ನಗರದಲ್ಲಿ ಆರಂಭಿಸಿದ್ದು, ಈ ಅಭಿಯಾನ 4 ದಿನಗಳ ಕಾಲ ನಡೆಯಲಿದೆ. 

ಅಭಿಯಾನಕ್ಕೆ ಬಿಬಿಎಂಪಿ, ಕೆಎಸ್ಆರ್'ಟಿಸಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳೂ ಕೈಜೋಡಿಸಿದೆ. 

ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ರಂದೀಪ್ ಅವರು, ಉಗುಳುವುದು ನಗರದ ಸೌಂದರ್ಯ ಮತ್ತು ಸ್ವಚ್ಛತೆಯನ್ನು ಹಾಳು ಮಾಡುತ್ತದೆ. ಇದು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಗರದ ಸ್ವಚ್ಛ ಸರ್ವೇಕ್ಷಣಾ ಶ್ರೇಣಿಯ ಮೇಲೆಯೂ ಪರಿಣಾಮ ಬೀರುತ್ತದೆ. ಈ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಬೇಕು. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಇದರಿಂದ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸಾರ್ವಜನಿಕವಾಗಿ ಉಗುಳುವುದು ಅಪರಾಧವಾಗಿದ್ದು, ಈ ಅಭಿಯಾನದ ಮೂಲಕ ಅದನ್ನು ಬಲಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT