ನಮ್ಮ ಮೆಟ್ರೋ ರೈಲು(ಸಾಂದರ್ಭಿಕ ಚಿತ್ರ) 
ರಾಜ್ಯ

ಆಗಸ್ಟ್ 11, 12ರಂದು ವಿಜಯನಗರ-ಮೈಸೂರು ರಸ್ತೆಯ ಮೆಟ್ರೋ ಮಾರ್ಗ ಸ್ಥಗಿತ

ಆಗಸ್ಟ್ 11, 12ರಂದು ಎರಡು ದಿನಗಳ ಕಾಲ ವಿಜಯನಗರ-ಮೈಸೂರು ರಸ್ತೆಯ ಮೆಟ್ರೋ ಮಾರ್ಗ ಸ್ಥಗಿತಗೊಳ್ಳಲಿದೆ. 

ಬೆಂಗಳೂರು: ಆಗಸ್ಟ್ 11, 12ರಂದು ಎರಡು ದಿನಗಳ ಕಾಲ ವಿಜಯನಗರ-ಮೈಸೂರು ರಸ್ತೆಯ ಮೆಟ್ರೋ ಮಾರ್ಗ ಸ್ಥಗಿತಗೊಳ್ಳಲಿದೆ. 

ಈ ಬಗ್ಗೆ ಸ್ವತಃ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು. ಈ ಕುರಿತಂತೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ನೂತನ ಮಾರ್ಗದ ಕೆಲಸದ ನಿಮಿತ್ತ ಮೆಟ್ರೋ ಸೇವೆ (Bengaluru Namma Metro) ಸ್ಥಗಿತಗೊಳ್ಳಲಿದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮೆಟ್ರೋ ಮಾರ್ಗದ ಕೆಲಸ ನಡೆಯುವ ಕಾರಣ ಈ ಮಾರ್ಗದಲ್ಲಿ ಎರಡು ದಿನಗಳ ಕಾಲ ಸೇವೆ ಲಭ್ಯವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೆಟ್ರೋ  ಸೇವೆ ರಾತ್ರಿ 8 ಗಂಟೆವರೆಗೆ ಮಾತ್ರ!
ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾತ್ರಿ 9 ಗಂಟೆಯಿಂದ ನೈಟ್ ಕರ್ಫ್ಯೂ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ನಮ್ಮ ಮೆಟ್ರೋ ರೈಲು ಸೇವೆಯನ್ನು ಒಂದು ಗಂಟೆ ಕಡಿತ ಮಾಡಲಾಗಿದ್ದು, ರಾತ್ರಿ 8 ಗಂಟೆಯವರೆಗೆ ಮಾತ್ರ ಸೇವೆಯು ಲಭ್ಯ ಇರಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ. 

ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು,  ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ವಿಧಿಸಲಾಗಿರುವ ರಾತ್ರಿ ಕರ್ಫ್ಯೂ ದೃಷ್ಟಿಯಿಂದ ಕೊನೆಯ ಮೆಟ್ರೋ ರೈಲು ಸೇವೆ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 9 ಗಂಟೆಯ ಬದಲು ರಾತ್ರಿ 8 ಗಂಟೆಗೆ ಅಂತ್ಯವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವೆರೆಗೆ ಮೆಟ್ರೋ ರೈಲು ಸೇವೆ ಲಭ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿದ್ದ ಟೆಕ್ಕಿ ನಾಪತ್ತೆ: ಲ್ಯಾಪ್‌ಟಾಪ್‌ನಲ್ಲಿ ಶಾಂತಲಾ ಡ್ರಾಪ್‌ ಪಾಯಿಂಟ್‌ ಸರ್ಚ್‌; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ: 13 ಮಂದಿ ಬಲಿ, 75 ಜನರಿಗೆ ಗಾಯ; ಇದು 4 ವರ್ಷಗಳಲ್ಲೇ ಅತ್ಯಂತ ಡೆಡ್ಲಿ ಅಟ್ಯಾಕ್!

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video