ರಾಜ್ಯ

ಗೃಹ ಖರೀದಿದಾರರಿಗೆ ಆನ್ ಲೈನ್ ನಲ್ಲಿ ಮಾಹಿತಿ ನೀಡಲಿರುವ ರೇರಾ

Srinivas Rao BV

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಮತ್ತಷ್ಟು ಪಾರದರ್ಶಕತೆಯನ್ನು ಅಳವಡಿಸಿಕೊಂಡಿದ್ದು, ರೇರಾ ಮೂಲಕ ನ್ಯಾಯ ಪಡೆಯುವುದಕ್ಕೆ ಹರಸಾಹಸ ಪಡುತ್ತಿದ್ದ ಹಲವು ಮಂದಿ ಗೃಹ ಖರೀದಿದಾರರ ಬೇಡಿಕೆ ಈಡೇರಿದೆ. 

ನೋಂದಣಿಯಾಗದ ಯೋಜನೆಗಳ ಸ್ಥಳ ಪರಿಶೀಲನೆ ನಡೆಸುವುದಕ್ಕೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ರೇರಾ ಮಾಹಿತಿ ನೀಡಿದೆ. 

ಕೆ-ರೇರಾ ಕಳೆದ ವಾರ ಕೈಗೊಂಡ ಕ್ರಮದಿಂದಾಗಿ ಅದರ ನ್ಯಾಯಾಲಯವು ನೀಡಿದ ತೀರ್ಪುಗಳನ್ನು ಸಾರ್ವಜನಿಕವಾಗಿ ಪ್ರಕಟವಾಗಿದ್ದು, ಎಲ್ಲರೂ ತೀರ್ಪನ್ನು ವೀಕ್ಷಿಸಬಹುದಾಗಿದೆ. ತಿರಸ್ಕೃತಗೊಂಡ ಗೃಹ ಯೋಜನೆಗಳ ಡೇಟಾ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳಲಿದ್ದು, ಜನತೆಗೆ ಆಸ್ತಿ ಮೇಲೆ ಹೂಡಿಕೆ ಮಾಡುವ ವೇಳೆ ಸೂಕ್ತ ನಿರ್ಧಾರಕೈಗೊಳ್ಳುವುದಕ್ಕೆ ಸಹಕಾರಿಯಾಗಲಿದೆ. 

ಜನರ ಸಾಮೂಹಿಕ ಪ್ರಯತ್ನಗಳಿಗಾಗಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂಎಸ್ ಶಂಕರ್ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ನ್ಯಾಯಾಧೀಶ ಅಧಿಕಾರಿ  ರೀಫಂಡ್, ಪರಿಹಾರ, ಬಡ್ಡಿ ಹಾಗೂ ಕೆ-ರೇರಾ ಅಧಿಕಾರಿಗಳಿಂದ ನಿರ್ಧಾರ್ವಾಗಿರುವ ಸ್ವಾಧೀನ, ಸವಲತ್ತುಗಳು, ಮರುಪಾವತಿಗಳು ಪರಿಹಾರಗಳ ಬಗ್ಗೆ ಮಾಹಿತಿ ಎಲ್ಲರಿಗೂ ಕಾಣಲು ಸಿಗುತ್ತಿದೆ. ಈ ಹಿಂದೆ ದೂರುದಾರರಿಗೆ ಮಾತ್ರ ನೋಡಲು ಲಭ್ಯವಾಗಿತ್ತು ಎಂದು ಹೇಳಿದ್ದಾರೆ. ಈ ವರೆಗೂ 5,124 ಯೋಜನೆಗಳಿಗೆ ರೇರಾ ನೋಂದಣಿಗಾಗಿ ಅರ್ಜಿ ಸಲ್ಲಿಸಲಾಗಿದೆ. 4,210 ಯೋಜನೆಗಳಿಗೆ ಅನುಮೋದನೆ ದೊರೆತಿದೆ. 

SCROLL FOR NEXT