ರಾಜ್ಯ

ಹಾಸನ: ಶ್ರವಣಬೆಳಗೊಳದಲ್ಲಿ 10ನೇ ಶತಮಾನದ ಶಿಲಾ ಶಾಸನ ಪತ್ತೆ

Shilpa D

ಹಾಸನ: ಹಾಸನ ಜಿಲ್ಲೆಯ ಪ್ರಸಿದ್ಧ ಜೈನ ತೀರ್ಥ ಕ್ಷೇತ್ರವಾದ ಶ್ರವಣಬೆಳಗೊಳದ ಸಮೀಪದ ನಾಗಯ್ಯನಕೊಪ್ಪಲು ಗ್ರಾಮದಲ್ಲಿ 10 ನೇ ಶತಮಾನದ ಕಲ್ಲಿನ ಶಾಸನಮಂಗಳವಾರ ಪತ್ತೆಯಾಗಿದೆ.

ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು,  ಐತಿಹಾಸಿಕ ಸ್ಮಾರಕಗಳು ಮತ್ತು ಶಿಲ್ಪಗಳನ್ನು ಸಂರಕ್ಷಿಸಲಾಗಿರುವ ವಸ್ತುಸಂಗ್ರಹಾಲಯಕ್ಕೆ  ಕಲ್ಲಿನ ಶಾಸನವನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಕೃಷಿ ಕೆಲಸ ಮಾಡುವಾಗ ಪತ್ತೆಯಾಗಿರುವ ಶಾಸನದಲ್ಲಿ ಕನ್ನಡ ಸಾಹಿತ್ಯವಿದೆ.

ಎಸ್ಎನ್ ಪಿಯು ಕಾಲೇಜಿನ ಸಂಶೋಧಕ ಮತ್ತು ಉಪನ್ಯಾಸಕ ಡಾ ಎಸ್ ದಿನೇಶ್ ಪ್ರಕಾರ, ಶಾಸನದಲ್ಲಿ ಮೌರ್ಯ ವಂಶದ ಜೈನ ಧರ್ಮ ಮತ್ತು ದೊರೆ ಚಂದ್ರಗುಪ್ತನ ಬಗ್ಗೆ ಮಾಹಿತಿ ಇದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಮೊದಲ ಕನ್ನಡ ಶಾಸನ ಪತ್ತೆಯಾಗಿತ್ತು.
 

SCROLL FOR NEXT