ರಾಜ್ಯ

ದಕ್ಷಿಣ ಕನ್ನಡದಲ್ಲಿ ಪ್ರಕರಣಗಳ ಹೆಚ್ಚಳ: ಕೋವಿಡ್-19 ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ಕಳಿಸಲು ಸಿಎಂ ಸೂಚನೆ

Srinivas Rao BV

ದಕ್ಷಿಣ ಕನ್ನಡ: ಕರಾವಳಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ಕಡ್ಡಾಯವಾಗಿ ಕಳಿಸುವಂತೆ ಜಿಲ್ಲಾಡಳಿತಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.   

ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯ ಪರಿಶೀಲನೆ ಸಭೆ ನಡೆಸಿ ಮಾತನಾಡಿರುವ ಅವರು ಸಿಸಿಸಿಗಳಲ್ಲಿ ಸೌಲಭ್ಯಗಳನ್ನು ಸ್ಥಾಪಿಸುವಂತೆ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರ್, ವೈದ್ಯಕೀಯ ಸಿಬ್ಬಂದಿ, ಔಷಧಿ ಪೂರೈಕೆಗಳು ಸಮರ್ಪಕವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದ್ದಾರೆ. 

"ಪ್ರಕರಣಗಳ ಸಂಖ್ಯೆ ಹೆಚ್ಚಳವಿರುವ ಪ್ರದೇಶದಲ್ಲಿ ಸೌಲಭ್ಯಗಳನ್ನು ಹೆಚ್ಚಿಸಿ, ರೋಗಲಕ್ಷಣ ಇರುವವರು ಹಾಗೂ ರೋಗ ಲಕ್ಷಣ ರಹಿತ ರೋಗಿಗಳನ್ನು ಪ್ರತ್ಯೇಕಿಸಿ ಸೋಂಕು ಹರಡುವುದನ್ನು ತಪ್ಪಿಸಲು ಅವರನ್ನು ಸಿಸಿಸಿ ಗಳಿಗೆ ದಾಖಲಿಸಿ" ಎಂದು ಸಿಎಂ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದ್ದಾರೆ.  ಸಿಸಿಸಿಗಳಲ್ಲಿ ಚಿಕಿತ್ಸೆ ಪಡೆದ ಬಳಿಕ 10 ದಿನಗಳ ಕಾಲ ಹೋಮ್ ಐಸೊಲೇಷನ್ ಗೆ ರೋಗಿಗಳನ್ನು ಕಳಿಸಬಹುದಾಗಿದೆ

ಮೈಕ್ರೋ ಕಂಟೈನ್ಮೆಂಟ್ ಜೋನ್ ಗಳನ್ನು ಗುರುತಿಸದೇ ಇರುವುದರಿಂದ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಸೋಂಕಿತ ವ್ಯಕ್ತಿಗಳ ಮನೆಯ ಸುತ್ತಲಿನ ನಾಲ್ಕು ಮನೆಗಳನ್ನು ಮೈಕ್ರೋ ಕಂಟೈನ್ಮೆಂಟ್ ಜೋನ್ ಗಳೆಂದು ಗುರುತಿಸಿ, ಸಿಸಿಸಿ ಗಳಿಗೆ ತೆರಳಲು ಮನವರಿಕೆ ಮಾಡಬೇಕು. ಮತ್ತೊಮ್ಮೆ ಲಾಕ್ ಡೌನ್ ಅನಿವಾರ್ಯತೆ ಎದುರಾಗದಂತೆ ಎಚ್ಚರ ವಹಿಸಲು ಆರೋಗ್ಯ ಅಧಿಕಾರಿಗಳು ಸ್ಥಳಗಳಲ್ಲಿ ಇದ್ದು ಸೋಂಕು ಹರಡುವಿಕೆಯನ್ನು ನಿಯಂತ್ರಿಸಬೇಕು, ಮುಂದಿನ ವಾರ ಅಥವಾ 10 ದಿನಗಳಲ್ಲಿ ಮನೆಯಲ್ಲಿ ಐಸೊಲೇಟ್ ಆಗಿರುವವರ ಪೈಕಿ ಶೇ.80 ರಷ್ಟು ಮಂದಿ ಸಿಸಿಸಿಗಳಿಗೆ ವರ್ಗಾವಣೆಯಾಗಬೇಕು, ಅಧಿಕಾರಿಗಳು ಅಂತರರಾಜ್ಯ ಗಡಿ ಭಾಗದಲ್ಲಿ ಹೆಚ್ಚು ಜಾಗರೂಕರಾಗಿದ್ದು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು, ಮೂರು ಪಾಳಿಗಳಲ್ಲಿ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಹಾಗೂ ಪೊಲೀಸರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. 

SCROLL FOR NEXT