ರಾಜ್ಯ

ಪ್ರತಿಕಾಯ ಕ್ಷೀಣತೆಯ ಕಾರಣ ಸ್ವಾಭಾವಿಕ ಕೋವಿಡ್ ಇಮ್ಯೂನಿಟಿಯಿಂದ ಈಗಲೂ ಕರ್ನಾಟಕ ದೂರ: ಅಧ್ಯಯನ

Nagaraja AB

ಬೆಂಗಳೂರು: ರಾಜ್ಯದಲ್ಲಿ ನಡೆಸಿದ ಎರಡನೇ ಕೋವಿಡ್-19 ಸೆರೋ ಸರ್ವೇಯಲ್ಲಿ ರೋಗನಿರೋಧಕ ಶಕ್ತಿ ಕ್ಷೀಣತೆಯಿಂದ ಇಮ್ಯುನೊಗ್ಲಾಬ್ಯುಲಿನ್ ಜಿ (ಐಜಿಜಿ) ಸೆರೋಪ್ರೆವೆಲೆನ್ಸ್‌ನ ಕಡಿಮೆ ಗುಣಮಟ್ಟವನ್ನು ಬಹಿರಂಗಪಡಿಸಿದೆ.  ಐಜಿಜಿ ರಕ್ತದಲ್ಲಿ ಕಂಡುಬರುವ ಸರ್ವೇ ಸಾಮಾನ್ಯವಾದ ರೋಗ ನಿರೋಧಕ ಶಕ್ತಿಯ ವಿಧವಾಗಿದೆ. ಎರಡನೇ ಸಮೀಕ್ಷೆಯ ಕೊನೆಯಲ್ಲಿ ಐಜಿಜಿ ಹರಡುವಿಕೆ ಕೇವಲ ಶೇ. 15. 6 ರಷ್ದಿದ್ದು,  ಮೊದಲ ಸೆರೋ ಸರ್ವೇಯಲ್ಲಿ ಅಂದಾಜು ಒಟ್ಟು ಶೇ.27.7 ರಷ್ಟು ಸೋಂಕಿಗಿಂತ ಕಡಿಮೆಯಾಗಿದೆ.

ಉತ್ತಮ ಪರೀಕ್ಷೆ, ವರದಿ ಮತ್ತು ವೈದ್ಯಕೀಯ ನಿರ್ವಹಣೆ ಅಗತ್ಯವಿರುವ ಜಿಲ್ಲೆಗಳನ್ನು ಗುರುತಿಸಲು  ಸೆಂಟಿನೆಲ್ ಆಧಾರಿತ ಜನಸಂಖ್ಯಾ ಸಮೀಕ್ಷೆ ಸಹಾಯ ಮಾಡಿದೆ. ಸಮೀಕ್ಷೆಯ ಸಮಯದಲ್ಲಿ ರಾಜ್ಯವು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಪಡೆಯುವಲ್ಲಿ  ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ, ಲಸಿಕೆ ವ್ಯಾಪ್ತಿಯನ್ನು ಹೆಚ್ಚಿಸಬೇಕು ಮತ್ತು ಕೋವಿಡ್ -19 ಹರಡುವಿಕೆ  ತಡೆಗಟ್ಟಲು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ರಾಜ್ಯಾದ್ಯಂತ ಜನವರಿ 25 ರಿಂದ ಫೆಬ್ರವರಿ 18ರವರೆಗೂ 290 ಆಸ್ಪತ್ರೆಗಳಲ್ಲಿ ಸರ್ವೆಯನ್ನು ನಡೆಸಲಾಗಿದೆ. 

ಆಶ್ಚರ್ಯಕಾರಿ ವಿಷಯವೇನೆಂದರೆ ಎಲ್ಲಾ ಜಿಲ್ಲೆಗಳಲ್ಲಿ ಅಂದಾಜು ಸಕ್ರಿಯ ಹರಡುವಿಕೆ ಶೂನ್ಯವಾಗಿತ್ತು. ಬಿ. 1.617 ರೂಪಾಂತರ ಮತ್ತು ಅದರ ಉಪ- ರೂಪಾಂತರದಿಂದ ರೋಗ ನಿರೋಧಕ ಶಕ್ತಿ ಕ್ಷೀಣತೆಯಿಂದಾಗಿ ಮಾರ್ಚ್ ಯಿಂದ ಜೂನ್ ವರೆಗೆ ಸೋಂಕಿನಲ್ಲಿ ಏರಿಕೆಯಾಗಿದೆ ಎಂಬುದನ್ನು ಅಧ್ಯಯನ ತಿಳಿಸಿದೆ

ರೋಗ ನಿರೋಧಕ ಶಕ್ತಿ ಕ್ಷೀಣತೆ ನಿಟ್ಟಿನಲ್ಲಿ ಪರೀಕ್ಷಾ ಕಿಟ್‌ನ ವೈದ್ಯಕೀಯ ಸೂಕ್ಷ್ಮತೆಯನ್ನು ನಿರ್ಣಯಿಸಲು ಒಂದು  ಅಧ್ಯಯನವನ್ನು ಸಹ ನಡೆಸಲಾಯಿತು. ಮೊದಲ ಸೆರೋಸರ್ವೇಯಿಂದ ಪಾಸಿಟಿವ್ ಪಾಸಿಟಿವ್ ಬಂದಿರುವ ಕೆಲವರನ್ನು ನೆನಪಿಸಿಕೊಳ್ಳಲಾಯಿತು. ಅವರಲ್ಲಿ ಭಾಗವಹಿಸಿದ್ದ ಶೇ.38.9 ರಷ್ಟು ಮಂದಿಯಲ್ಲಿ ಐಜಿಬಿ ಪತ್ತೆಯಾಗಿದೆ. ಎಲಿಸಾ ಪರೀಕ್ಷೆಯ ಆಧಾರದ ಮೇಲೆ ಹೆಚ್ಚು ನಿರ್ದಿಷ್ಟವಾದ ಮರುಸಂಯೋಜಕ ನ್ಯೂಕ್ಲಿಯೋಕ್ಯಾಪ್ಸಿಡ್ ಅಥವಾ ಸ್ಪೈಕ್ ಪ್ರೋಟೀನ್ ಪ್ರತಿಜನಕಗಳ ಬದಲಿಗೆ ಸಂಪೂರ್ಣ ಸೆಲ್ ಪ್ರತಿಜನಕವನ್ನು ಬಳಸಲಾಗಿದೆ. ದೀರ್ಘಾವಧಿಯ ಅಧ್ಯಯನದ ಆಧಾರದ ಮೇಲೆ ಸರ್ವೇ ಸಮಯದಲ್ಲಿ ಕೋವಿಡ್-19 ಹೊರೆ ಶೇ 26.5 ರಿಂದ ಶೇ. 37. 7ರಷ್ಟಿತ್ತು ಎಂದು ಅಧ್ಯಯನ ನಡೆಸಿದ ಲೇಖಕರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

18 ವರ್ಷದವರು ಹಾಗೂ ಅದಕ್ಕೂ ಮೇಲ್ಪಟ್ಟವರ ಮೇಲೆ ಪರೀಕ್ಷೆ ನಡೆಸಲಾಗಿದ್ದು, ಅವರ ರೋಗ ನಿರೋಧಕ ಶಕ್ತಿ ಹಾಗೂ ಆರ್ ಟಿ- ಪಿಸಿಆರ್ ವರದಿಯನ್ನು ಪರೀಕ್ಷಿಸಲಾಗಿದೆ. ಇದು ಮೈಸೂರಿನಲ್ಲಿ ಶೇ (23.6) ಮಂಡ್ಯದಲ್ಲಿ ಶೇ (31.9) ಕೊಡಗಿನಲ್ಲಿ (ಶೇ 27.1) ಚಾಮರಾಜನಗರದಲ್ಲಿ (ಶೇ.22.6) ಮತ್ತು ಕೋಲಾರದಲ್ಲಿ  ಶೇ.20.8 ರಷ್ಟು ಹರಡುವಿಕೆ ಕಂಡುಬಂದಿದೆ.

SCROLL FOR NEXT