ರಾಜ್ಯ

ಬೆಂಗಳೂರು: ಪ್ರಕರಣಗಳ ಇ-ಫೈಲಿಂಗ್ ಹೆಚ್ಚೆಚ್ಚು ವಕೀಲರ ಆಸಕ್ತಿ

Lingaraj Badiger

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನಲ್ಲಿ 809 ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ 7,424 ಅರ್ಜಿಗಳನ್ನು ಇ-ಫೈಲಿಂಗ್ ಸೌಲಭ್ಯದ
ಮೂಲಕ ಸಲ್ಲಿಸಲಾಗಿದ್ದು, ಕಳೆದ ವರ್ಷದ ಆರಂಭದಲ್ಲಿ ವಕೀಲರು ಮತ್ತು ದಾವೆದಾರರಿಗೆ ಇ-ಫೈಲಿಂಗ್ ಅವಕಾಶ ನೀಡಲಾಗಿತ್ತು.

ದಿಲ್‌ರಾಜ್ ರೋಹಿತ್ ಸಿಕ್ವೇರಾ ಮತ್ತು ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿದ ನಿರ್ದೇಶನಗಳಿಗೆ ಪ್ರತಿಕ್ರಿಯೆಯಾಗಿ, ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರ ವಿಭಾಗೀಯ ಪೀಠದ ಮುಂದೆ ರಿಜಿಸ್ಟ್ರಾರ್ ಈ ಮಾಹಿತಿ ನೀಡಿದ್ದಾರೆ.

ರಿಜಿಸ್ಟ್ರಾರ್(ಕಂಪ್ಯೂಟರ್) ಎನ್ ಜಿ ದಿನೇಶ್ ನೀಡಿದ ಮಾಹಿತಿ ಪ್ರಕಾರ, ಹೈಕೋರ್ಟ್ ಇ-ಫೈಲಿಂಗ್ ಪ್ರಕರಣಗಳ ಪ್ರಕ್ರಿಯೆಯಲ್ಲಿ ವಿವಿಧ ಜಿಲ್ಲೆಗಳ ಸಿಬ್ಬಂದಿ ಮತ್ತು ಬಾರ್ ಕೌನ್ಸಿಲ್ ಸದಸ್ಯರಿಗೆ ತರಬೇತಿ ನೀಡಲು ಮುಂದಾಗಿದೆ.

ಜನವರಿ 20, 2020 ರಿಂದ ಬಳ್ಳಾರಿಯ ವಾಣಿಜ್ಯ ನ್ಯಾಯಾಲಯದಲ್ಲಿ ಇ-ಫೈಲಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ. ಜುಲೈ
17, 2020 ರಿಂದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಗಳು; ಮತ್ತು ಜುಲೈ 21, 2020 ರಿಂದ ಹೈಕೋರ್ಟ್‌ನಲ್ಲಿ
ಇ-ಫೈಲಿಂಗ್ ಗೆ ಅವಕಾಶ ನೀಡಲಾಗಿದೆ. 

ಈ ಸಮಯದಲ್ಲಿ 317 ವಕೀಲರು ಮತ್ತು 455 ದಾವೆದಾರರು(ತಾವಾಗಿಯೇ ಅರ್ಜಿ ಸಲ್ಲಿಸಿದ ವ್ಯಕ್ತಿಗಳು) ಹೈಕೋರ್ಟ್‌ನಲ್ಲಿ ಇ-ಫೈಲಿಂಗ್ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ ಮತ್ತು ಜುಲೈ 13, 2021 ರ ವರೆಗೆ 1,991 ವಕೀಲರು ಮತ್ತು 574 ದಾವೆದಾರರು ಇ-ಫೈಲಿಂಗ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

SCROLL FOR NEXT