ರಾಜ್ಯ

ಹೆಚ್ಚುತ್ತಿರುವ ಕೋವಿಡ್ ಸೋಂಕು: ಅಪಾರ್ಟ್'ಮೆಂಟ್'ಗಳ ಮೇಲೆ ಬಿಬಿಎಂಪಿ ತೀವ್ರ ನಿಗಾ

Manjula VN

ಬೆಂಗಳೂರು: ನಗರದಲ್ಲಿ ಕ್ಲಸ್ಟರ್ ಹಾಗೂ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಹಾಗೂ ಹಾಸ್ಟೆಲ್ ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ನಗರದ ಅಪಾರ್ಟ್'ಮೆಂಟ್ ಗಳಲ್ಲಿ ಒಂದೇ ಕಡೆ ಮೂರಕ್ಕಿಂತ ಹೆಚ್ಚಿನ ಪಾಸಿಟಿವ್ ಪ್ರಕರಣ ಪತ್ತೆಯಾದಲಲ್ಲಿ ಅಂತಹ ಅಪಾರ್ಟ್'ಮೆಂಟನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ, ತೀವ್ರ ನಿಗಾವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಅಪಾರ್ಟ್'ಮೆಂಟ್ ಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಸಂಬಂಧ ನಗರದ ಸುಮಾರು 1 ಸಾವಿರ ಅಪಾರ್ಟ್'ಮೆಂಟ್ ನಿವಾಸಿಗಳ ಅಸೋಸಿಯೇಷನ್ ಗಳೊಂದಿಗೆ ಚರ್ಚಿಸುತ್ತಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ. ಈ ಅಪಾರ್ಟ್'ಮೆಂಟ್ ಗಳಲ್ಲಿ ಸುಮಾರು 11 ಲಕ್ಷ ಜನಸಂಖ್ಯೆಯಿದೆ. ಹೀಗಾಗಿ ಸೋಂಕು ನಿಯಂತ್ರಣ ಸಂಬಂಧ ಮೂರಕ್ಕಿಂತ ಹೆಚ್ಚಿನ ಪ್ರಕರಣ ಪತ್ತೆಯಾದರೆ ತಕ್ಷಣ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 15 ರವರೆಗೆ ಬೆಂಗಳೂರಿನಲ್ಲಿ 172 ಕಂಟೈನ್‌ಮೆಂಟ್ ವಲಯಗಳಿದ್ದು, ಅವುಗಳಲ್ಲಿ 49 ಮಹಾದೇವಪುರದಲ್ಲಿ, 25 ಯಲಹಂಕದಲ್ಲಿ, 25 ಪೂರ್ವ ವಲಯದಲ್ಲಿ, 36 ಪಶ್ಚಿಮ ವಲಯದಲ್ಲಿ, 24 ಬೊಮ್ಮನಹಳ್ಳಿಯಲ್ಲಿ, ದಕ್ಷಿಣ ವಲಯದಲ್ಲಿ 21, ಆರ್‌ಆರ್‌ನಲ್ಲಿ ಐದು ಮತ್ತು ದಾಸರಹಳ್ಳಿಯಲ್ಲಿ ಒಂದು, ಇವುಗಳಲ್ಲಿ 80 ಅಪಾರ್ಟ್ಮೆಂಟ್, 9 ಹಾಸ್ಟೆಲ್ ಗಳು ಮತ್ತು 81 ಮನೆಗಳಾಗಿವೆ ಎಂದು ತಿಳಿದುಬಂದಿದೆ. 

SCROLL FOR NEXT