ರಾಜ್ಯ

ನಮ್ಮ ಪೋಷಕರನ್ನೂ ಭಾರತಕ್ಕೆ ಕರೆ ತನ್ನಿ: ಸರ್ಕಾರಕ್ಕೆ ಆಫ್ಘನ್​ ವಿದ್ಯಾರ್ಥಿಗಳ ಮನವಿ

Manjula VN

ಬೆಂಗಳೂರು: ಅಫ್ಘಾನಿಸ್ತಾನ ರಾಷ್ಟ್ರ ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಅಫ್ಘನ್ ವಿದ್ಯಾರ್ಥಿಗಳು ಕರ್ನಾಟಕ ಹೆಲ್ಪ್ ಡೆಸ್ಕ್​ಗೆ ಮೇಲಿಂದ ಮೇಲೆ ಮನವಿ ಮಾಡುತ್ತಿದ್ದಾರೆ. 

ನಿನ್ನೆಯಷ್ಟೇ ಅಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆ ಕುರಿತು ಮಾಹಿತಿ ನೀಡಿದ್ದ ನೋಡಲ್ ಅಧಿಕಾರಿ ಉಮೇಶ್‌ ಕುಮಾರ್ ಅವರು, ಕನ್ನಡಿಗರನ್ನು ರಕ್ಷಿಸಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ನಮಗೆ ಇರುವ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಇಲಾಖೆಗೆ (ಎಂಇಎ) ಕೊಡುತ್ತಿದ್ದೇವೆ. ಆಫ್ಘನ್‌ನಲ್ಲಿ ಎಷ್ಟು ಕನ್ನಡಿಗರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಹೀಗಾಗಿ ಆಫ್ಘನ್‌ನಲ್ಲಿನ ಪರಿಸ್ಥಿತಿ ನೋಡಿಕೊಂಡು ಎಂಇಎ ಕ್ರಮಕೈಗೊಳ್ಳಲಿದೆ ಹೇಳಿದ್ದರು. 

ಇದರ ಬೆನ್ನಲ್ಲೇ ಬೆಂಗಳೂರು ನಗರದಲ್ಲಿರುವ 14 ಮಂದಿ ಅಫ್ಘನ್ ವಿದ್ಯಾರ್ಥಿಗಳು ಕರ್ನಾಟಕ ಹೆಲ್ಪ್ ಡೆಸ್ಕ್​ಗೆ ಮನವಿ ಮಾಡಿಕೊಂಡಿದ್ದು, ತಮ್ಮ ಪೋಷಕರನ್ನು ಭಾರತಕ್ಕೆ ಕರೆ ತರುವಂತೆ ಕೇಳಿಕೊಳ್ಳುತ್ತಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಮೇಶ್ ಕುಮಾರ್ ಅವರು, ಭಾರತಕ್ಕೆ ಬರಲು ಇಚ್ಛಿಸುವ ಆಫ್ಘನ್ ಪ್ರಜೆಗಳಿಗೆ ತಾತ್ಕಾಲಿಕ ವೀಸಾ ನೀಡಲಾಗುವುದು. ತಾತ್ಕಾಲಿಕ ವೀಸಾ ಪಡೆಯಲು, ವೆಬ್ ಸೈಟ್ ಮೂಲಕ ಅಪ್ಲೈ ಮಾಡಿ ಎಂದು ಸಲಹೆ ನೀಡಿದ್ದಾರೆ.

SCROLL FOR NEXT