ರಾಜ್ಯ

ಶಸ್ತ್ರಾಸ್ತ್ರ ದುರ್ಬಳಕೆ ಪ್ರಕರಣ ಹೆಚ್ಚಳ: ಪರವಾನಗಿ ಪ್ರಕ್ರಿಯೆ ಕಠಿಣಗೊಳಿಸಿದ ಮಂಗಳೂರು ನಗರ ಪೊಲೀಸರು

Harshavardhan M

ಮಂಗಳೂರು: ನಗರದಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಹೆಚ್ಚಿನ ಸಂಖ್ಯೆಯ ಅರ್ಜಿಗಳು ದಾಖಲಾಗಿದ್ದು, ಇದರಿಂದ ಸಂಸ್ಕೃತಿ ಹೆಚ್ಚಳವಾಗುತ್ತಿರುವುದಕ್ಕೆ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಪರವಾನಗಿ ಪಡೆದಿದ್ದವರು ಆಯುಧಗಳನ್ನು ದುರ್ಬಳಕೆ ಮಾಡಿದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪೊಲಿಸರು ಪರವಾನಗಿ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಳೆದ 8 ತಿಂಗಳ ಅವಧಿಯಲ್ಲಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದವರು ಅಕ್ರಮ ಉದ್ದೇಶಗಳಿಗೆ ಶಸ್ತ್ರಾಸ್ತ್ರ ಬಳಕೆ ಮಾಡಿದ ೫ ಪ್ರಕರಣಗಳು ದಾಖಲಾಗಿವೆ. ಕೃಷಿ ಉದ್ದೇಶಗಳಿಗೆಂದು ಕೆಲವರಿಗೆ ಪರವಾನಗಿ ನೀಡಲಾಗಿತ್ತು. ಅವರಲ್ಲಿ ಕೆಲವರು ಬೇಟೆ ಮತ್ತು ಡಕಾಯಿತಿ ಕೃತ್ಯಗಳಿಗೆ ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಕಂಡುಬಂಡಿತ್ತು.

ಇವೆಲ್ಲದರಿಂದಾಗಿ ಶಸ್ತ್ರಾಸ್ತ್ರ ಪರವಾನಗಿ ನೀಡಿಕೆ ಪ್ರಕ್ರಿಯೆಯನ್ನು ಕಠಿಣಗೊಳಿಸಿರುವುದಾಗಿ ಮಂಗಳೂರು ನಗರ ಉಪ ಆಯುಕ್ತರಾದ ಹರಿರಾಂ ಶಂಕರ್ ಹೇಳಿದ್ದಾರೆ. ಈ ವರ್ಷ ಒಟ್ಟು 23 ಮಂದಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕೇವಲ 5 ಅರ್ಜಿದಾರರಿಗೆ ಮಾತ್ರ ಪರವಾನಗಿ ನೀಡಲಾಗಿದೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.
ಎರಡು ಆಯುಧಗಳನ್ನು ಹೊಂದಿದ್ದವರಿಗೆ, ಹೆಚ್ಚುವರಿ ಆಯುಧವನ್ನು ಮಾರಾಟ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. 
 

SCROLL FOR NEXT