ರಾಜ್ಯ

ಶಾಲೆಯೆಂಬ ದೇವಸ್ಥಾನ ನಮ್ಮ ಸಮಾಜಕ್ಕೆ ಒಳಿತು ಮಾಡಲಿ: ಸುರೇಶ್ ಕುಮಾರ್

Manjula VN

ಬೆಂಗಳೂರು: ಸಾಂಕ್ರಾಮಿಕ ಕೊರೊನಾ‌ ಹಿನ್ನೆಲೆಯಲ್ಲಿ ಶಾಲೆಗೆ ಬೀಗ ಹಾಕಲಾಗಿತ್ತು. ಇದೀಗ ಮೊದಲ ಹಂತವಾಗಿ 9, 10, 11 ಮತ್ತು 12ನೇ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು, ಶಾಲೆಗೆ ಮರಳಿ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಭಾಶಯ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಇಂದಿನಿಂದ ಶಾಲೆಗೆ ಬರಲು ಉತ್ಸುಕರಾಗಿರುವ ಮಕ್ಕಳಿಗೆಲ್ಲ ಶುಭಾಶಯಗಳು. ಧೈರ್ಯದಿಂದ ಬನ್ನಿ, ಆನಂದದಿಂದ ಕಲಿಯಿರಿ, ಗೆಳೆಯರೊಂದಿಗೆ ಲವಲವಿಕೆಯಿಂದಿರಿ. ನಿಮ್ಮ ಶಾಲೆ, ಶಿಕ್ಷಕರು ನಿಮಗಾಗಿ ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ದೀರ್ಘ ಅವಧಿಯ ಬಳಿಕ ಇಂದಿನಿಂದ ರಾಜ್ಯದ ಶಾಲೆಗಳಲ್ಲಿ ಮತ್ತೊಮ್ಮೆ ಮಕ್ಕಳ ಕಲರವ ಆರಂಭವಾಗುತ್ತಿರುವುದು ತುಂಬಾ ಸಂತಸ ತಂದಿದೆ. ಮಕ್ಕಳ ಬಾಲ್ಯ ಕಳೆದು ಹೋಗದಂತೆ ಕಾಯುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಇಂದು ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹ. ಇದಕ್ಕಾಗಿ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

SCROLL FOR NEXT