ಸಾಂದರ್ಭಿಕ ಚಿತ್ರ 
ರಾಜ್ಯ

19 ವರ್ಷದ ಯುವಕನ ಅಂಗಾಂಗಳನ್ನು ತುರ್ತು ಅಗತ್ಯವಿದ್ದ ನಾಲ್ವರು ರೋಗಿಗಳಿಗೆ ದಾನ ಮಾಡಿದ ಕುಟುಂಬ

ಕಮಲಾಪುರ ತಾಲೂಕಿನ ಲಾಡ್ ಮುಗಳಿ ಗ್ರಾಮದ ಬ್ರೈನ್ ಡೆಡ್‌ ಆದ ಯುವಕನ ಕುಟುಂಬ ಸದಸ್ಯರು ಆತನ ಅಂಗಾಂಗಳನ್ನು ತುರ್ತು ಅಗತ್ಯವಿದ್ದ ನಾಲ್ವರು ರೋಗಿಗಳಿಗೆ ದಾನ ಮಾಡಿದ್ದಾರೆ.

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡ್ ಮುಗಳಿ ಗ್ರಾಮದ ಬ್ರೈನ್ ಡೆಡ್‌ ಆದ ಯುವಕನ ಕುಟುಂಬ ಸದಸ್ಯರು ಆತನ ಅಂಗಾಂಗಳನ್ನು ತುರ್ತು ಅಗತ್ಯವಿದ್ದ ನಾಲ್ವರು ರೋಗಿಗಳಿಗೆ ದಾನ ಮಾಡಿದ್ದಾರೆ.

ಲಾಡ್ ಮುಗಳಿ ಗ್ರಾಮದ ಮಹೇಶ್ ರೇವಣ ಸಿದ್ದಪ್ಪ ಎಂಬ 19 ವರ್ಷದ ಯುವಕ ಆಗಸ್ಟ್ 20 ಮೇಲಿನ ಅಂತಸ್ತಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ನಂತರ ಯುನೈಟೆಡ್ ಆಸ್ಪತ್ರೆಗೆ ಆತನನನ್ನು ದಾಖಲು ಮಾಡಲಾಗಿತ್ತು. ಕೆಲ ದಿನಗಳ ನಂತರ ಕಲಬುರಗಿಯ ಚಿರಾಯು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. 

ವೈದ್ಯರು ವಿವಿಧ ಪ್ರಕಾರದ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಆತನ ಮೆದುಳು ನಿಷ್ಕ್ರೀಯಗೊಂಡಿರುವುದಾಗಿ ಕಂಡುಬಂದಿತ್ತು. ಈ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿ, ಅಂಗಾಂಗ ದಾನ ಮಾಡಲು ಇಷ್ಟವಿದೆಯೇ ಎಂದು ಕೇಳಲಾಗಿತ್ತು. ಅದಕ್ಕೆ ಅವರು ಸಮ್ಮತಿಸಿದ್ದರು. ಕುಟುಂಬದ ಸದಸ್ಯರ ಒಪ್ಪಿಗೆ ಪಡೆದ ನಂತರ ಮೃತದೇಹವನ್ನು ಪರೀಕ್ಷಿಸಿ, ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಲಾಯಿತು. ಇಂದು ಬೆಳಗ್ಗೆ ಅಂಗಾಂಗಳನ್ನು ತೆಗೆಯಲಾಯಿತು ಎಂದು ಚಿರಾಯು ಆಸ್ಪತ್ರೆ ಮುಖ್ಯಸ್ಥ ಡಾ. ಮಂಜುನಾಥ್ ದೊಶೆಟ್ಟಿ ಹೇಳಿದರು.

ಮಹೇಶ್ ಕಿಡ್ನಿಯನ್ನು ಚಿರಾಯು ಆಸ್ಪತ್ರೆಯಲ್ಲಿನ ರೋಗಿಯೊಬ್ಬರಿಗೆ ಅಳವಡಿಸಲಾಯಿತು.ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದು ಲಿವರ್ ಗೆ ಮನವಿ ಮಾಡಿ ವೈದ್ಯರ ತಂಡವೊಂದನ್ನು ಆಸ್ಪತ್ರೆಗೆ ಕಳುಹಿಸಿತ್ತು. ನಂತರ ಅದನ್ನು ಕಲಬುರಗಿ ಮತ್ತು ತೆಲಂಗಾಣದ ಪೊಲೀಸರ ನೆರವಿನಿಂದ ಜಿರೋ ಟ್ರಾಫಿಕ್ ನಲ್ಲಿ ಹೈದ್ರಾಬಾದ್ ಗೆ ಕಳುಹಿಸಲಾಯಿತು. ತದನಂತರ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಯಿತು. ಕಣ್ಣುಗಳನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ನೀಡಲಾಯಿತು. ಮೃತನ ಅಂಗಾಂಗಗಳನ್ನು ಕೆಲ ಜನರ ಜೀವ ರಕ್ಷಣೆಗೆ ನೀಡುವ ಮೃತ ಮಹೇಶ್ ಕುಟುಂಬ ಸದಸ್ಯರು ಸ್ವಲ್ಪ ನೆಮ್ಮದಿಯಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ