ರಾಜ್ಯ

ಗದಗ ಜಿಲ್ಲೆಯ ಸೂಡಿ ಪಟ್ಟಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಚಾಲುಕ್ಯರ ಕಾಲದ ಸುಂದರ ಐತಿಹಾಸಿಕ ಸ್ಮಾರಕ!

Sumana Upadhyaya

ಗದಗ: ಸೂಡಿ, ಗದಗ ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣವಾಗಿದ್ದು,  ಕ್ರಿ.ಶ 1100ರ ಕಾಲದಲ್ಲಿ ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿತ್ತು.

ಸೂಡಿ ಪಟ್ಟಣದಲ್ಲಿ ಒಂದು ಸುಂದರ ಐತಿಹಾಸಿಕ ಸ್ಮಾರಕವಿದ್ದು, ಇಲ್ಲಿ ಚಿನ್ನದ ನಾಣ್ಯಗಳನ್ನು ತಯಾರಿಸುತ್ತಿದ್ದರು ಎಂಬ ಪ್ರತೀತಿಯಿದೆ. ಅಂದು ಸುಂದರ ಸ್ಮಾರಕವಾಗಿದ್ದ ಈ ಜಾಗ ಇಂದು ನಿಷ್ಪ್ರಯೋಜಕವಾಗಿ ಬಿದ್ದಿದೆ. ಸ್ಮಾರಕದ ಕೆಳಗೆ ಬೇಡವಾದ ಕಸ-ಕಡ್ಡಿಗಳು ಬಿದ್ದು ಯಾರೂ ಅಲ್ಲಿಗೆ ಹೋಗಲಾರದ ಸ್ಥಿತಿಯಲ್ಲಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಕಾರದ ಬೇರೆ ಸಂಸ್ಥೆಗಳ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. 

ಜನರಿಗೆ ಉತ್ತಮ ಸುಂದರ ಪ್ರವಾಸಿ ತಾಣವಾಗಿದ್ದರೂ ನಿರ್ವಹಣೆಯಿಲ್ಲದಿರುವುದರಿಂದ ಇಲ್ಲಿಗೆ ಯಾರೂ ಭೇಟಿ ನೀಡುತ್ತಿಲ್ಲ. ಇಲ್ಲಿ ನಾಗಗುಂದ ಎಂಬ ಮೆಟ್ಟಿಲು ಬಾವಿಯಿದ್ದು ಅಲ್ಲಿಗೆ ಪ್ರವಾಸಿಗರು ಬರುತ್ತಾರೆ. ಅಲ್ಲಿನ ಬೇರೆ ಸ್ಮಾರಕಗಳನ್ನು ಪುನರುತ್ಥಾನ ಹಾಗೂ ನವೀಕರಣ ಮಾಡುವಂತೆ ಜನರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

SCROLL FOR NEXT