ನಟ ಚೇತನ್ 
ರಾಜ್ಯ

ಆದಿವಾಸಿಗೆ ಗುಂಡೇಟು: ಸೂಕ್ತ ತನಿಖೆಗೆ ನಟ ಚೇತನ್ ಆಗ್ರಹ

ಆದಿವಾಸಿ ವ್ಯಕ್ತಿಯೊಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಅರಣ್ಯ ಸಿಬ್ಬಂದಿ ಬಂದೂಕಿನಿಂದ ಗುಂಡಿಕ್ಕಿ ಗಾಯಗೊಳಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿಯ ರಾಣಿಗೇಟ್ ಜೇನುಕುರುಬರ ಹಾಡಿಯಲ್ಲಿ ನಡೆದಿರುವುದು ವರದಿಯಾಗಿದೆ. 

ಮೈಸೂರು: ಆದಿವಾಸಿ ವ್ಯಕ್ತಿಯೊಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಅರಣ್ಯ ಸಿಬ್ಬಂದಿ ಬಂದೂಕಿನಿಂದ ಗುಂಡಿಕ್ಕಿ ಗಾಯಗೊಳಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿಯ ರಾಣಿಗೇಟ್ ಜೇನುಕುರುಬರ ಹಾಡಿಯಲ್ಲಿ ನಡೆದಿರುವುದು ವರದಿಯಾಗಿದೆ.  ಜೇನುಕುರುಬರ ಹಾಡಿಯ ನಿವಾಸಿ ಬಸವನಿಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೇನುಕುರುಬರ ಹಾಡಿಯ ನಿವಾಸಿ ಬಸವ ಗಾಯಾಳು ಯುವಕ. ಇವರಿಗೆ ಅರಣ್ಯ ಇಲಾಖೆಯ ವಾಚ್‌ಮನ್ ಸುಬ್ರಮಣಿ ಹಾಗೂ ಇತರ ಮೂವರು ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೈಯಲು ಯತ್ನಿಸಿರುವುದಾಗಿ ಸಂತ್ರಸ್ತರ ಪತ್ನಿ ಪುಷ್ಪಾ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ನಡುವೆಬಸವ ಮತ್ತು ಆತನ ಸಹಚರರು ಗಂಧದ ಕಟ್ಟಿಗೆ ಸಾಗಿಸುತ್ತಿದ್ದರೆಂದು ಆರೋಪಿಸಿ  ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಾ ಪೊಲೀಸ್ ದೂರು ನೀಡಿದ್ದಾರೆ.

ಜೋಳ ಕೊಯ್ಲು ಮಾಡುತ್ತಿದ್ದ ವೇಳೆ ಬಸವ ಬರ್ಹಿದೆಸೆಗೆಂದು ಪಕ್ಕದ ಅಣ್ಣಯ್ಯ ಎಂಬವವರ ಜಮೀನಿಗೆ ಹೋಗಿದ್ದರು. ಈ ವೇಳೆ ಅರಣ್ಯ ಇಲಾಖೆಯ ವಾಚ್‌ಮನ್ ಸುಬ್ರಮಣಿ ಜೊತೆಗೆ ಮಹೇಶ ಮತ್ತು ಸಿದ್ದ ಹಾಗೂ ಗಾರ್ಡ್ ಮಂಜು ಎಂಬವರು ಬಸವರನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಆದರೆ ಕೈಸಿಗದಿದ್ದಾಗ ವಾಚ್‌ಮನ್ ಸುಬ್ರಮಣಿ ಕೋವಿಯಿಂದ ಗುಂಡು ಹಾರಿಸಿದರೆನ್ನಲಾಗಿದೆ. ಗುಂಡು ಬಸವ ಅವರ ಹಿಂಭಾಗಕ್ಕೆ ತಗಲಿದೆ ಎಂದು ಪುಷ್ಪಾ ಅವರು ಬೈಲಕುಪ್ಪೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

"ಒಂದೂವರೆ ತಿಂಗಳ ಹಿಂದೆ ನಮ್ಮ ಮನೆ ಮುಂದಿನ ಮರದ ವಿಚಾರವಾಗಿ ಬಸವರಿಗೆ ಗುಂಡಿಕ್ಕಿದ ಅರಣ್ಯ ಇಲಾಖೆಯ ಇದೇ ಸಿಬ್ಬಂದಿ ಮತ್ತು ನಮಗೂ ಜಗಳವಾಗಿತ್ತು. ಸಿಬ್ಬಂದಿಯ ಅನ್ಯಾಯವನ್ನು ನಾವು ಪ್ರಶ್ನಿಸಿದ್ದೆವು. ಇದೇ ದ್ವೇಷದಲ್ಲಿ ಅವರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತರ ಪತ್ನಿ ಪುಷ್ಪಾ ಆರೋಪಿಸಿದ್ದಾರೆ.

ಘಟನೆ ಜೊತೆಗೆ ಆದಿವಾಸಿ ಸಮಯದಾಯದ ಏಳಿಗೆ, ಸಮಾಜ ಸೇವೆ, ದಲಿತ ಪರ, ಕನ್ನಡ ಪರ ಹೋರಾಟಗಳಲ್ಲಿ ತೊಡಗಿಕೊಂಡಿರುವ ಚೇತನ್ ಅಹಿಂಸ, ಇದೀಗ ಆದಿವಾಸಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಆದಿವಾಸಿಗಳ ಬವಣೆಗೆ ಕೊನೆ ಇಲ್ಲದಂತಾಗಿದೆ. ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಒಬ್ಬ ಆದಿವಾಸಿ ಯುವಕನಿಗೆ ಗುಂಡೇಟು ಹೊಡೆದು, ಆ ಪ್ರಕರಣವನ್ನು ತಿರುಚುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಹೋರಾಡಿ ನ್ಯಾಯಾ ಕೊಡಿಸಲು ಮೈಸೂರಿಗೆ ಬಂದಿದ್ದೇನೆ. ನಮ್ಮ ಮನವಿಯಂತೆ ಅರಣ್ಯ ಇಲಾಖೆ ಮೇಲೆ ಎಫ್ಐಆರ್ ದಾಖಲಿಸಿ, ನಿಷ್ಪಕ್ಷಪಾತ ತನಿಖೆಯಾಗದಿದ್ದರೆ ಮೈಸೂರಿನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ಆದಿವಾಸಿ ಯುವಕನ ನ್ಯಾಯಾಕ್ಕಾಗಿ ರೈತ ಸಂಘ, ಮಹಿಳಾ, ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳನ್ನು ಸೇರಿ ಬೃಹತ್ ಹೋರಾಟ ನಡೆಸಲಿವೆ'' ಎಂದು ಹೇಳಿದರು

ಆದಿವಾಸಿಗಳೊಂದಿಗೆ ಕಾರ್ಯನಿರ್ವಹಿಸುವ ಗ್ರೀನ್ ಇಂಡಿಯಾ ನಿರ್ದೇಶಕ ಮಹೇಂದ್ರ ಕುಮಾರ್ ಮಾತನಾಡಿ, ಕ್ಷುಲಕ ಕಾರಣಕ್ಕಾಗಿ ಅರಣ್ಯ ಇಲಾಖೆ ವಾಚ್‌ ಮ್ಯಾನ್ ಹಾಡಿ ನಿವಾಸಿ ಬಸವ ಅವರಿಗೆ ಗುಂಡು ಹಾರಿಸಿರುವುದು ಖಂಡನೀಯ. ಬಸವ ಗಂಧದ ಮರ ಕಡಿದು ಸಾಗಿಸುತ್ತಿದ್ದ ಎಂಬ ಅರಣ್ಯ ಇಲಾಖೆಯ ಆರೋಪ ನಿರಾಧಾರ. ಆ ಜಾಗದ ಸುತ್ತಮುತ್ತ ಎಲ್ಲಿಯೂ ಗಂಧದ ಮರ ಬೆಳೆದಿಲ್ಲ. ಹೀಗಿದ್ದರೂ ಆತನ ಮೇಲೆ ಸುಳ್ಳು ಆರೋಪ ಹೊರಿಸಿ ಆತನ ಮೇಲೆಯೇ ಎಫ್ಐಆರ್ ದಾಖಲಿಸಿದ್ದಾರೆ. ನಾವು ದೂರು ನೀಡಿದರೆ ಸ್ವೀಕರಿಸುತ್ತಿಲ್ಲ. ಇದು ಏಕಮುಖದ ತನಿಖೆಯಾಗುತ್ತಿದೆ. ಎರಡು ಬದಿಯಿಂದ ತನಿಖೆಯಾಗಬೇಕಾದರೆ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧವೂ ಎಫ್ಐಆರ್ ದಾಖಲಾಗಬೇಕು. ಸಮಗ್ರವಾಗಿ ತನಿಖೆಯಾಗಬೇಕು'' ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT