ಅಕ್ರಮ ಸೀಸ ಆಸಿಡ್ ಬ್ಯಾಟರಿ ಸಂಸ್ಕರಣಾ ಘಟಕ 
ರಾಜ್ಯ

ಆನೇಕಲ್ ತಾಲೂಕಿನಲ್ಲಿ ಅಕ್ರಮ ಬ್ಯಾಟರಿ ಘಟಕಗಳು ನೆಲಸಮ: ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಾಚರಣೆ

ಅಕ್ರಮ ಸೀಸ ಆಸಿಡ್ ಬ್ಯಾಟರಿ ಸಂಸ್ಕರಣಾ ಘಟಕಗಳನ್ನು ಪತ್ತೆಹಚ್ಚುವ ಬಹುದೊಡ್ಡ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಗ್ರಾಮಗಳಲ್ಲಿ 13 ಇಂತಹ ಘಟಕಗಳನ್ನು ಗುರುತಿಸಿ ನೆಲಸಮ ಮಾಡಿದೆ. 

ಬೆಂಗಳೂರು: ಅಕ್ರಮ ಸೀಸ ಆಸಿಡ್ ಬ್ಯಾಟರಿ ಸಂಸ್ಕರಣಾ ಘಟಕಗಳನ್ನು ಪತ್ತೆಹಚ್ಚುವ ಬಹುದೊಡ್ಡ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಗ್ರಾಮಗಳಲ್ಲಿ 13 ಇಂತಹ ಘಟಕಗಳನ್ನು ಗುರುತಿಸಿ ನೆಲಸಮ ಮಾಡಿದೆ. 

ಅಣಬೆಗಳಂತೆ ತಲೆಯೆತ್ತಿರುವ ಈ ಬ್ಯಾಟರಿ ಸಂಸ್ಕರಣಾ ಘಟಕಗಳು ಪರಿಸರಕ್ಕೆ ತೀವ್ರ ಹಾನಿಯಾಗಿವೆ. ಅವೈಜ್ಞಾನಿಕವಾದ ಈ ಘಟಕಗಳು ಮಣ್ಣು, ನೀರು ಮತ್ತು ಪರಿಸರಕ್ಕೆ ತೀವ್ರ ಹಾನಿಯಾಗಿವೆ. ಇದರಲ್ಲಿರುವ ಅತ್ಯಧಿಕ ಲೋಹ ಪದಾರ್ಥಗಳೇ ಅದಕ್ಕೆ ಕಾರಣವಾಗಿದೆ. 

ನಾವು 13 ಘಟಕಗಳನ್ನು ಪತ್ತೆಹಚ್ಚಿ ಧ್ವಂಸಗೊಳಿಸಿದ್ದೇವೆ. ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಕಾಡುಜಕ್ಕನಹಳ್ಳಿ, ಬೊಮ್ಮಂಡಹಳ್ಳಿ, ವಡೇರಹಳ್ಳಿ ಹಾಗೂ ಚಿನ್ನಯ್ಯನಪಾಳ್ಯ ಗ್ರಾಮಗಳಲ್ಲಿ ಇಂತಹ ಅನಧಿಕೃತ ಘಟಕಗಳು ಸಾಕಷ್ಟಿವೆ ಎಂದು ಕೆಎಸ್ ಪಿಸಿಬಿ ಸದಸ್ಯ-ಕಾರ್ಯದರ್ಶಿ ಶ್ರೀನಿವಾಸುಲು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ನಮ್ಮ ತಂಡವು ಹೋಗಿ ಜಿಗಣಿ ಹೋಬಳಿಯ ಹುಲ್ಲಹಳ್ಳಿ, ರಾಮಸಾಗರ, ಸೀತಹಹಳ್ಳಿ, ಗಿಡ್ಡೇನಹಳ್ಳಿ ಗ್ರಾಮಗಳಲ್ಲಿ ಐದು ಅಕ್ರಮ ಘಟಕಗಳನ್ನು ನೆಲಸಮಗೊಳಿಸಿತು. ಆಪರೇಟರ್‌ಗಳು ಬಳಸಿದ ಬ್ಯಾಟರಿಗಳನ್ನು ಸ್ಕ್ರ್ಯಾಪ್ ಮತ್ತು ಇತರ ಡೀಲರ್‌ಗಳಿಂದ ಕೆಜಿಗೆ 95 ರಿಂದ 100 ರೂಪಾಯಿವರೆಗೆ ಖರೀದಿಸುತ್ತಾರೆ.ನಂತರ ಅವುಗಳನ್ನು ಅವೈಜ್ಞಾನಿಕವಾಗಿ ಪುಡಿಮಾಡುತ್ತಾರೆ, ಸೀಸದ ಮಿಶ್ರಲೋಹವನ್ನು ಹೊರತೆಗೆಯಲು ಬಾಯ್ಲರ್ ಗಳನ್ನು ಬಳಸುತ್ತಾರೆ. ಬ್ಯಾಟರಿ ವಿತರಕರಿಗೆ ಪ್ರತಿ ಕೆಜಿಗೆ 150ರಿಂದ 175 ರೂಪಾಯಿಗೆ  ಸೀಸವನ್ನು ಮಾರಾಟ ಮಾಡುತ್ತಾರೆ. ಅವುಗಳ ನಿರ್ವಹಣಾ ವೆಚ್ಚ ಪ್ರತಿ ಕೆಜಿಗೆ 2 ರೂಪಾಯಿಯಷ್ಟಾಗುತ್ತದೆ ಎಂದು ವಿವರಿಸಿದರು.

ಪರಿಸರಕ್ಕೆ ಸಾಕಷ್ಟು ಹಾನಿ: ಘಟಕಗಳಲ್ಲಿ ಬ್ಯಾಟರಿಗಳನ್ನು ಪುಡಿಮಾಡಿ ಲೋಹಗಳು ಮತ್ತು ಸಲ್ಫ್ಯೂರಿಕ್ ಆಮ್ಲವನ್ನು ಹೊಂದಿರುವ ತ್ಯಾಜ್ಯವನ್ನು ಎಸೆಯುತ್ತಾರೆ. ಇದು ಮಣ್ಣಿನಲ್ಲಿ ಬೆರೆತು ಕಲುಷಿತವಾಗುತ್ತದೆ. ಸೀಸದ ಮಿಶ್ರಲೋಹವನ್ನು ಹೊರತೆಗೆಯಲು ಕುದಿಸುವಾಗ, ಚಿಮಣಿಯಿಂದ ಹೊಗೆಯು 2 ಕಿಲೋ ಮೀಟರ್ ವರೆಗೆ ಹರಡಿ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಸೀಸವು ವಿಷಕಾರಿ ಮತ್ತು ಬೆಳೆಗಳ ಮೇಲೆ ಪರಿಣಾಮ ಬೀರಬಹುದು. ಬ್ಯಾಟರಿಗಳಲ್ಲಿ ಪ್ಲಾಸ್ಟಿಕ್ ತೊಳೆದರೆ ಪರಿಸರಕ್ಕೂ ಹಾನಿಯಾಗುತ್ತದೆ ಎಂದರು.

ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ, 1981, ಜಲ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 1974 ಮತ್ತು ಪರಿಸರ (ರಕ್ಷಣಾ ಕಾಯ್ದೆ), 1986 ರ ಅಡಿಯಲ್ಲಿ ಅಕ್ರಮ ಘಟಕಗಳಿಗೆ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟ ಭೂ ಮಾಲೀಕರು ಸೇರಿದಂತೆ ಆರೋಪಿಗಳ ವಿರುದ್ಧ ಕೆಎಸ್‌ಪಿಸಿಬಿ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಶ್ರೀನಿವಾಸುಲು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT