ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ರಾಜ್ಯಪಾಲ ಗೆಹೋಟ್. 
ರಾಜ್ಯ

ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ರಾಜ್ಯಪಾಲ ಗೆಹ್ಲೋಟ್ ಭೇಟಿ

ನೌಕಾಪಡೆಯ ದಿನವಾದ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ಶನಿವಾರ ಭೇಟಿ ನೀಡಿ, ನೌಕಾಪಡೆಗಳಿಗೆ ಶುಭಾಶಯಗಳನ್ನು ಕೋರಿದರು.

ಕಾರವಾರ: ನೌಕಾಪಡೆಯ ದಿನವಾದ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ಶನಿವಾರ ಭೇಟಿ ನೀಡಿ, ನೌಕಾಪಡೆಗಳಿಗೆ ಶುಭಾಶಯಗಳನ್ನು ಕೋರಿದರು.

ನೌಕಾನೆಲೆಗೆ ಆಗಮಿಸಿದ ರಾಜ್ಯಪಾಲರನ್ನು ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಎನ್ ಎಂ ಅವರು ಸ್ವಾಗತಿಸಿದರು.

ಬಳಿಕ ರಾಜ್ಯಪಾಲರಿಗೆ ಐಎನ್‌ಎಸ್ ಕದಂಬ ಪರೇಡ್ ಮೈದಾನದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರೊಂದಿಗೆ ರಾಜ್ಯಪಾಲರು ಐಎನ್ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಪ್ರಯಾಣ ಮಾಡಿದರು, ಅಲ್ಲಿ ಅವರನ್ನು ಕ್ಯಾಪ್ಟನ್ ಸುಶೀಲ್ ಮೆನನ್, ಕಮಾಂಡಿಂಗ್ ಆಫೀಸರ್ ಐಎನ್ಎಸ್ ವಿಕ್ರಮಾದಿತ್ಯ ಅವರು ಸ್ವಾಗತಿಸಿದರು.

ನೌಕಪಡೆ ದಿನದ ಅಂಗವಾಗಿ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಯುದ್ಧನೌಕೆಗಳನ್ನು ಸಿಂಗರಿಸಲಾಗಿತ್ತು. ನೌಕಾಪಡೆಯ ಬ್ಯಾಂಡ್ ತಂಡ ಲಯಬದ್ಧವಾಗಿ ಬ್ಯಾಂಡ್ ನುಡಿಸಿ ಮೆರುಗು ತಂದಿತು.

ಆಕರ್ಷಿಕ ಬೀಟಿಂಗ್ ರೀಟ್ರೇಟ್ ಪ್ರದರ್ಶಿಸಲಾಯಿತು. ನೌಕಾದಿನದ ಸಮಾರಂಭದಲ್ಲಿ ರಾಜ್ಯಪಾಲಕು ಪಾಲ್ಗೊಂಡಿರುವುದಕ್ಕೆ ಕಂಬದ ನೌಕಾನೆಲೆಯ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ; ಭಾರತೀಯ ನಾವಿಕ ಬಲಿ, ಭಾರತ ತೀವ್ರ ಖಂಡನೆ..!

26 ದಿನ ಉಪವಾಸ ಮಾಡಿದ್ದೇನೆ... ಇನ್ನೂ ನನ್ನ ಪ್ರಾಮಾಣಿಕತೆಗೆ ಸಾಕ್ಷಿ ಬೇಕೇ?; ಟೀಕಾಕಾರರಿಗೆ ಸೋನಂ ವಾಂಗ್ಚುಕ್ ತಿರುಗೇಟು

Instagramನಲ್ಲಿ 30 ಕೋಟಿ ವೀಕ್ಷಣೆ ದಾಟಿದ Video: ನಿಮ್ಮ ಪ್ರೀತಿ-ಸಲಹೆಗಳು ಹೀಗೆ ಮುಂದುವರಿಯಲಿ; ಯುವ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

NEET ಪರೀಕ್ಷೆ ನಡೆಸುವ NTA ನಲ್ಲಿ ಮೇಜರ್ ಸರ್ಜರಿ: 47 ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ!

ಇರಾನ್ ಜಲ ಪ್ರದೇಶದಲ್ಲಿ 28 ಭಾರತೀಯ ಸಿಬ್ಬಂದಿಯಿದ್ದ LPG ಟ್ಯಾಂಕರ್ ಮೇಲೆ ದಾಳಿ!