ರಾಜ್ಯ

ಬೆಂಗಳೂರು: ಉದ್ಯೋಗ ಕಳೆದುಕೊಂಡು ಬೀದಿಪಾಲಾದ ಐಟಿಐ ಕಾರ್ಮಿಕರ ಪ್ರತಿಭಟನೆ

Nagaraja AB

ಬೆಂಗಳೂರು: ಉದ್ಯೋಗ ಕಳೆದುಕೊಂಡ ಬೀದಿ ಪಾಲಾದ ಐಟಿಐ ಲಿಮಿಟೆಡ್ ನ ಕಾರ್ಮಿಕರು ಕಳೆದ ಐದು ದಿನಗಳಿಂದ ಕಾರ್ಖಾನೆ ಆವರಣದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕಂಪನಿ ಈವರೆಗೂ ಪ್ರತಿಭಟನಾಕಾರರ ಸಮಸ್ಯೆ ಕೇಳಲು ಮುಂದಾಗಿಲ್ಲ. ಬುಧವಾರ ಬೆಳಗ್ಗೆ ಕಾರ್ಮಿಕರು ಕೆಲಸಕ್ಕೆ ಬಂದಾಗ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಆಗಿನಿಂದಲೂ ಅವರನ್ನು ಸೇರಿಸಿಕೊಳ್ಳಲು ನಿರಾಕರಿಸಲಾಗುತ್ತಿದೆ.

ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದರೂ ಸುಮಾರು 35 ವರ್ಷಗಳಿಂದ ಕಂಪನಿಯಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಗುತ್ತಿಗೆದಾರರ ಬದಲಾವಣೆಯಿಂದಾಗಿ  ಕೆಲಸದಿಂದ ವಜಾ ಮಾಡಲಾಗಿದೆ.  ಗುತ್ತಿಗೆದಾರರು ಯಾರು, ಅವರನ್ನು ಹೇಗೆ ಸಂಪರ್ಕಿಸುವುದು ಎಂಬ ಸಣ್ಣ ಸುಳಿವನ್ನು ನೀಡಿಲ್ಲ. ಹಲವು ಕಾರ್ಮಿಕರು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರ ಎಲ್ಲಾ ಕೆಲಸವನ್ನು ಕಂಪನಿ ಆಡಳಿತ ಮಂಡಳಿಯೇ ವಹಿಸಿ, ಮೇಲ್ವಿಚಾರಣೆ ಮಾಡಲಾಗುತಿತ್ತು ಎಂದು  ರಾಜ್ಯ ಜನರಲ್ ಕಾರ್ಮಿಕ ಯೂನಿಯನ್ ಮುಖಂಡ ಮೈತ್ರೇಯಿ ಕೃಷ್ಣನ್ ಹೇಳಿದ್ದಾರೆ. 

ಕಂಪನಿ ಮೊದಲಿನಿಂದಲೂ ಬಾಕಿ ವೇತನ, ಪಿಎಫ್ ಪಾವತಿಸದೆ ಕಾರ್ಮಿಕರನ್ನು ಶೋಷಿಸುತ್ತಿದೆ. ಜುಲೈ 2020ರಲ್ಲಿ ಒಪ್ಪಂದ ಮುಕ್ತಾಯ ಅಡಿಯಲ್ಲಿ ಸುಮಾರು 400 ಕಾರ್ಮಿಕರು ಕಂಪನಿ ವಿರುದ್ಧ ಸಿಡಿದೆದಿದ್ದರು .ಆದರೆ, ಅವರಲ್ಲಿ 150 ಮಂದಿ ಮತ್ತೆ ಉದ್ಯೋಗ ಪಡೆದುಕೊಂಡಿದ್ದರು. ಪ್ರತಿ ಕಾರ್ಮಿಕರಿಗೆ 1.5 ಲಕ್ಷ ನೀಡಬೇಕು ಎಂದು ಕಾರ್ಮಿಕರು ಇಟ್ಟಿದ್ದ ಬೇಡಿಕೆಯನ್ನು ಕಂಪನಿ ನಿರಾಕರಿಸಿತ್ತು. ಇದರಿಂದಾಗಿ ಕಾರ್ಮಿಕರು ಕೆಜಿಎಲ್ ಯೂ ಯೂನಿಯನ್ ರಚಿಸಿಕೊಂಡು ಕಂಪನಿ ವಿರುದ್ಧ ಕೇಸ್ ದಾಖಲಿಸಿದ್ದರು. ಆಗಿನಿಂದಲೂ ಕಾರ್ಮಿಕರ ಮೇಲೆ ಕಿರುಕುಳ ನಡೆಯುತ್ತಿದೆ ಎಂದು ಕೃಷ್ಣನ್ ಆರೋಪಿಸಿದ್ದಾರೆ. 

ಮೊದಲ ದಿನ ನಮ್ಮ ಜೊತೆಗೆ ಸಭೆ ನಡೆಸಿದ ಪ್ರಾದೇಶಿಕ ಕಾರ್ಮಿಕ ಆಯುಕ್ತ ಅಂಟೋನಿ ಸೆಬಾಸ್ಟಿಯನ್ , ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಕಂಪನಿಗೆ ಸಲಹೆ ನೀಡಿದ್ದರು. ನಾವು ದಾಖಲಿಸಿರುವ ಎಲ್ಲಾ ಕೇಸ್ ಗಳು ಇನ್ನೂ ವಿಚಾರಣೆ ನಡೆಯಬೇಕಾಗಿದೆ, ನಾವೆಲ್ಲ ಈಗ ಯೂನಿಯನ್ ಕಟ್ಟಿಕೊಂಡಿರುವುದಕ್ಕೆ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಹೇಮಂತ್ ಕುಮಾರ್ ತಿಳಿಸಿದರು

ಕೆಲಸದಿಂದ ತೆಗೆದಿರುವ ಕಾರ್ಮಿಕರು ಐಟಿಐ ನೌಕರರಲ್ಲ, ಏಜೆನ್ಸಿಯ ಭಾಗವಾಗಿದ್ದರು. ಅದು ತನ್ನ ಗುತ್ತಿಗೆಯನ್ನು ಹಿಂಪಡೆದಿದೆ ಎಂದು ಉಪ ಜನರಲ್ ಮ್ಯಾನೇಜರ್ ಮುರ್ಡೇಶ್ವರ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 
 

SCROLL FOR NEXT