ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಅಸಮಾಧಾನ, ಕೆ- ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ ಮನೆ ಖರೀದಿದಾರರು 

 ಪ್ರತಿಕ್ರಿಯೆ ನೀಡದೆ ಇದುದ್ದರಿಂದ ಬೇಸತ್ತ ಮನೆ ಖರೀದಿದಾರರು ತಮ್ಮ ವಿವಿಧ ಕುಂದಕೊರತೆಗಳನ್ನು ಬಗೆಹರಿಸುವಂತೆ ಕೆ. ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಬೆಂಗಳೂರು: ಪ್ರತಿಕ್ರಿಯೆ ನೀಡದೆ ಇದುದ್ದರಿಂದ ಬೇಸತ್ತ ಮನೆ ಖರೀದಿದಾರರು ತಮ್ಮ ವಿವಿಧ ಕುಂದಕೊರತೆಗಳನ್ನು ಬಗೆಹರಿಸುವಂತೆ ಕೆ. ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ದಶಕಗಳಷ್ಟು ಹಳೆಯದಾದ ಅಪೂರ್ಣ ಯೋಜನೆಗಳು,  ಬಿಲ್ಡರ್‌ಗಳ ವಿಫಲತೆ ಮತ್ತು ಅಸಂಖ್ಯಾತ ಅಕ್ರಮಗಳ ನಡುವೆ ಅಧಿಕಾರಿಗಳ ಕಡೆಯಿಂದ ಕ್ರಮ ತೆಗೆದುಕೊಳ್ಳದಿರುವುದು, ಬಿಲ್ಡರ್ ಗಳಿಂದ ಅಕ್ರಮಗಳ ಸರಮಾಲೆ ಮತ್ತಿತರ ಕುಂದುಕೊರತೆಗಳನ್ನು  10 ಯೋಜನೆಗಳ ಸುಮಾರು 30 ಜನರು ದಾಖಲಿಸಿದರು. ಮನೆ ಖರೀದಿದಾರರು ಎಲ್ಲಾ ಸಮಸ್ಯೆಗಳಿಗೆ ಪ್ರಾಪರ್ಟಿಗಾಗಿ ಲಭ್ಯವಾಗುವ ಇಎಂಐ ಮತ್ತು ಸಾಲಗಳೇ ಕಾರಣಗಳಾಗಿವೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಒಕ್ಕೂಟದ ಸದಸ್ಯ ಪದ್ಮನಾಭ ಚಾರ್, ಐದನೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಎರಡು ವಾರಗಳ ಹಿಂದೆ ಇಲ್ಲಿಗೆ ಬಂದು ಮನವಿ ಸಲ್ಲಿಸಲು ಪ್ರಯತ್ನಿಸಿದೇವು. ಆದರೆ, ಸಮಿತಿಯ ಯಾವುದೇ ಸದಸ್ಯರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಮ್ಮ ಕುಂದುಕೊರತೆಗಳನ್ನು ಯಾರು ಕೂಡಾ ಕೇಳಲಿಲ್ಲ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದರು.

 ಹಾಗೆಯೇ ಇತರ ಖರೀದಿದಾರರು, ತಮ್ಮ ಯೋಜನೆಯು 2016 ರಲ್ಲಿ ಪೂರ್ಣಗೊಳ್ಳಬೇಕಾಗಿದ್ದರೂ, ಬಿಲ್ಡರ್‌ಗಳು ನಿರ್ಮಾಣದ ಅವಧಿಯನ್ನು ವಿಸ್ತರಿಸಿರುವುದಿಂದ ಎಲ್ಲ ಇತರ ಖರೀದಿದಾರರು ದೊಡ್ಡ ನಷ್ಟ ಅನುಭವಿಸುತ್ತಿದ್ದಾರೆ. ಇತರ ಅನೇಕ ಮನೆ ಖರೀದಿದಾರರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಮನೆ ಖರೀದಿದಾರರ ಸಮಸ್ಯೆ ಆಲಿಸಿ, ಪರಿಹರಿಸಲು ಪ್ರತಿ ತಿಂಗಳು ಸಭೆಯೊಂದನ್ನು ಆಯೋಜಿಸಲಾಗುವುದು ಎಂದು ಕೆ- ರೇರಾ ಕಾರ್ಯದರ್ಶಿ ಕೆ. ನಾಗೇಂದ್ರ ಪ್ರಸಾದ್ ಭರವಸೆ ನೀಡಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT