ರಾಜ್ಯ

ಧಾರ್ಮಿಕ ಗ್ರಂಥಗಳ ದಹನ: ತನಿಖೆಗೆ ಆದೇಶಿಸಿದ ಕೋಲಾರ ಪೊಲೀಸ್

Srinivas Rao BV

ಕೋಲಾರ: ಕೋಲಾರ ಜಿಲ್ಲೆಯ ಹನುಮನಪಾಳ್ಯದಲ್ಲಿ ಧಾರ್ಮಿಕ ಗ್ರಂಥಗಳನ್ನು ಸುಟ್ಟುಹಾಕಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ. 

ಕ್ರೈಸ್ತ ಸಮುದಾಯದ ಸದಸ್ಯರು ಧಾರ್ಮಿಕ ಪುಸ್ತಕಗಳನ್ನು ಹಂಚುತ್ತಿದ್ದಾಗ ಅದಕ್ಕೆ ಬೆಂಕಿ ಹಚ್ಚಿದ್ದ ಆರೋಪ ಕೇಳಿಬಂದಿದೆ. 

ಎಸ್ ಪಿ ದೆಕ್ಕಾ ಕಿಶೋರ್ ಬಾಬು ಅವರು ಈ ಬಗ್ಗೆ ಮಾತನಾಡಿದ್ದು, ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪ್ರಾಥಮಿಕ ವರದಿ ಕಳಿಸಿರುವುದಾಗಿ ತಿಳಿಸಿದ್ದಾರೆ ಹಾಗೂ ವಿಸ್ತೃತ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಈ ವರೆಗೂ ಯಾವುದೇ ದೂರು ದಾಖಲಾಗಿಲ್ಲ.
 
ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ ಕ್ರೈಸ್ತ ಮತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸುವುದಕ್ಕೆ ಗ್ರಾಮದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ನಾಲ್ವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.  ಮತಾಂತರ ಮಾಡಲು ಯತ್ನಿಸುತ್ತಿರಲಿಲ್ಲ ಹೀಗಾಗಿ ಗ್ರಾಮಸ್ಥರು ವಶಕ್ಕೆ ಒಪ್ಪಿಸಿದವರನ್ನು ಬಿಡುಗಡೆ ಮಾಡಿ ಕಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT