ರಾಜ್ಯ

ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ತೇಜಸ್ವಿ ನಿಧನ

Sumana Upadhyaya

ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ, ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ(84) ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.

ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ನ ತಮ್ಮ ಪುತ್ರಿಯ ನಿವಾಸದಲ್ಲಿ ಕೊನೆಕಾಲವನ್ನು ಕಳೆಯುತ್ತಿದ್ದ ರಾಜೇಶ್ವರಿಯವರ ದೇಹವನ್ನು ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.

1966ರಲ್ಲಿ ಕುವೆಂಪುರವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರನ್ನು ವಿವಾಹವಾಗಿದ್ದ ರಾಜೇಶ್ವರಿಯವರು ಮೊದಲಿಗೆ 'ನನ್ನ ತೇಜಸ್ವಿ' ಪುಸ್ತಕ ಬರೆದು ಖ್ಯಾತಿ ಪಡೆದಿದ್ದರು.

ರಾಜೇಶ್ವರಿಯವರ ನಿಧನಕ್ಕೆ ನಾಡಿದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

SCROLL FOR NEXT